Showing posts with label ಮನ್ನಿ ಮನ್ನಿಗೆ ಪೇಳಬಂದಾ hayavadana ತಿಥಿತ್ರಯದ ಕೃತಿ MANNI MANNIGE PELABANDA TITHITRAYA KRUTI. Show all posts
Showing posts with label ಮನ್ನಿ ಮನ್ನಿಗೆ ಪೇಳಬಂದಾ hayavadana ತಿಥಿತ್ರಯದ ಕೃತಿ MANNI MANNIGE PELABANDA TITHITRAYA KRUTI. Show all posts

Saturday 27 March 2021

ಮನ್ನಿ ಮನ್ನಿಗೆ ಪೇಳಬಂದಾ ankita hayavadana ತಿಥಿತ್ರಯದ ಕೃತಿ MANNI MANNIGE PELABANDA TITHITRAYA KRUTI

Audio by Vidwan Sumukh Moudgalya


 ಶ್ರೀ ವಾದಿರಾಜರಿಂದ ರಚಿತವಾದಂತಹ 


 ತಿಥಿತ್ರಯದ ಕೃತಿ 

(ದಶಮಿ , ಏಕಾದಶಿ ಹಾಗೂ ದ್ವಾದಶಿ ಆಚರಣೆಯ ಕುರಿತು)


 ರಾಗ : ಕಾಂಬೋಧಿ   ತಿಶ್ರನಡೆ 


ಮನ್ನಿ ಮನ್ನಿಗೆ ಪೇಳಬಂದಾ

ಅನ್ನಾಥ ಬಂಧು ಹಯವದನ ಮುಕ್ಕುಂದಾ ॥ಪ॥


ತನ್ನ ನಂಬಿದವರ ತಾಪತ್ರಯವ ಕಳ-

ದುನ್ನತ ಪದವೀಯನೀವ ತಿಥಿತ್ರಯ ॥೧॥


ವೃದ್ಧಿ ಮಾತ್ರ ಅರುಣೋದಯದ ಕೆಳಗ

ಶುದ್ಧ ಘಳಿಗೆ ವಂದಕೆ ಸಾಕು ಎಂದೂ ॥೨॥


ಅತಿ ವೃದ್ಧಿಗೊಂದು ಘಳಿಗೆ ಕೆಳಗೆ ವಿಂ-

ಶತಿ ಪಾನೀವಾಳದೊಳಗೆ ಶುದ್ಧಿಬೇಕೆಂದು ॥೩॥


ತಿಥಿ ಸಮಯವಾದಾಗಾ ಹತ್ತು ಪಾನೀವಾಳ

ತಿಥಿಕ್ಷಯದೊಳಗೈದರೊಳು ಶುದ್ಧಿಬೇಕೆಂದು ॥೪॥


ವೃದ್ಧಿ ಹ್ರಾಸದೊಳು ದಶಮಿಗೀ ಪರಿಯಲ್ಲಿ

ಶುದ್ಧಿಬೇಕು ಅನಥ್ಯಯರ ಪಥದಲೆಂದು ॥೫॥


ಊರೆಲ್ಲರರಿವಂತೆ ಕೇರಿ ಕೇರಿಗಳಲ್ಲಿ

ಸಾರಿಡಂಗುರವ ಹೊಯಿಸಿರೋ ನೀವೆಂದು ॥೬॥



ಇಂದು ದಶಮೀ ಶಾಖಾ ವ್ರತಗೂಡಿಕೊಂಡು

ಒಂದೆ ಭೋಜನವನ್ನು ಮಾಡಿರೊ ನೀವೆಂದು ॥೭॥


ತಾಂಬೂಲ ಚರ್ವಣ ಸಲ್ಲ ಸ್ತ್ರೀಸಂಗದ

ಹಂಬಲವನು ಮಾಡದಿರಿ ನೀವೆಂದು ॥೮॥


ತನ್ನವರೊಡನಾಡಿ ತನ್ನ ಪೂಜೆಯಮಾಡಿ

ಅನ್ಯಾರ ಕೂಡಾಡಾಬ್ಯಾಡಿ ನೀವೆಂದು ॥೯॥


ನಾಳೆ ಏಕಾದಶಿ ಉಪವಾಸವ ಬಂದು

ಆಲಸ್ಯವ ಮಾಡದಲೆ ಮಾಡಿರೊ ಎಂದು ॥೧೦॥


ಜಲಪಾನಸಲ್ಲ ಭೋಜನಸಲ್ಲ ಫಲಗಳು

ತಾಂಬುಲಸಲ್ಲ ನಾಲ್ಕುಹೊತ್ತಿನ 

ಆಹಾರವನೆ ಬಿಟ್ಟು ಹದಿನಾಲ್ಕು ಝಾವದ

ಜಾಗರ ಮಾಡಿರೊ ಎಂದೂ ॥೧೧॥


ಇರುಳು ಹಗಲು ಜಾಗರದಲ್ಲಿದ್ದು ತನ್ನ

ಚರಣದ ಪೂಜೆಯನೆ ಮಾಡಿರೊ ಎಂದೂ ॥೧೨॥


ಹರಿಕಥೆಯನು ಕೇಳಿ ಹರಿದಾಸರೊಡನಾಡಿ

ತರುಣಿಯರಾಸಿಯನೆ ಬಿಡಿರೊ ಎಂದೂ ॥೧೩॥


ಇಂದುಮುಖಿಯ ಬಿಟ್ಟು ಕಂದನ್ನ ಕೊಂದಪ್ಪೆ

ನೆಂದ ನೃಪನ ಕಾಯ್ದವ ನಾನೆಂದು ॥೧೪॥


ಕಳ ಅರ್ಧ ದ್ವಾದಶಿ ಬಂದಾಗ ಬಿಡದಲೆ

ವಲಿಮೆಯಿಂದ ಪಾರಣೆ ಮಾಡಿರೊ ಎಂದು ॥೧೫॥


ಸುಖ ಪಾರಣ್ಯಾಯಿತೆಂದು ಕೇಳಿ ನಿಮ್ಮ 

ಸುಕೃತವ ಹರಿಪದದಲರ್ಪಿಸಿರೋ ಎಂದು ॥೧೬॥


ಇಂತಿ ತಿಥಿತ್ರಯವನ್ನು ಮಾಡಿದವರಿಗಾ-

ನಂತ ಫಲವೀವ ಹಯವದನನು ಎನ್ನು ॥೧೭॥

*******