Showing posts with label ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು ನಲ್ಲೆ hayavadana GOLLATIYARA KANNA DRUSHTI MAGAGAAYITAMMA BAHU NALLE. Show all posts
Showing posts with label ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು ನಲ್ಲೆ hayavadana GOLLATIYARA KANNA DRUSHTI MAGAGAAYITAMMA BAHU NALLE. Show all posts

Saturday, 4 December 2021

ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು ನಲ್ಲೆ ankita hayavadana GOLLATIYARA KANNA DRUSHTI MAGAGAAYITAMMA BAHU NALLE


ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮಾ ಬಹು

ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ||ಪ||


ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ

ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ

ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ

ಭಂಗಪಡಿಸುತ ಬಾಯ ತೆರೆದನಮ್ಮ  ||೧||


ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ

ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ

ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ_

ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ   ||೨||


ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯನಮ್ಮ

ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ

ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ

ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ  ||೩||

***


gollatiyara kaNNadRuShTi magagaayitammaa bahu

nalleyaru baMdu mechchumaddu maaDi hOdaramma ||pa||


aMgake oLitillavamma kaMgaLu muchchalollanamma

heMgaLa nODutale chaTTikkidanamma

taMgi nIru eredevamma tuMgagaatra eddu namma

bhaMgapaDisuta baaya teredanamma  ||1||


nInu maiya nODamma tanuvu kiridaayitamma

moleyaana koDali taaya nODanallamma

annava koLalollanamma atibhItanaada daitya_

kanne molehaalanuMDu beLedanallamma   ||2||


namma maatu kELanamma ommege maihodiyanamma

summane ghorasutaane malaganallamma

bommajeTTige maaDidevamma ommegiShTellavaayitamma

namma hayavadanaginnu aMjikillamma  ||3||

***

ಗೊಲ್ಲತಿಯರ ಕಣ್ಣದೃಷ್ಟಿ ಮಗಗಾಯಿತಮ್ಮ ಬಹು

ನಲ್ಲೆಯರು ಬಂದು ಮೆಚ್ಚುಮದ್ದು ಮಾಡಿ ಹೋದರಮ್ಮ ಪ.


ಅಂಗಕೆ ಒಳಿತಿಲ್ಲವಮ್ಮ ಕಂಗಳು ಮುಚ್ಚಲೊಲ್ಲನಮ್ಮ

ಹೆಂಗಳ ನೋಡುತಲೆ ಚಟ್ಟಿಕ್ಕಿದನಮ್ಮ

ತಂಗಿ ನೀರು ಎರೆದೆವಮ್ಮ ತುಂಗಗಾತ್ರ ಎದ್ದು ನಮ್ಮ

ಭಂಗಪಡಿಸುತ ಬಾಯ ತೆರೆದನಮ್ಮ 1


ನೀನು ಮೈಯ ನೋಡಮ್ಮ ತನುವು ಕಿರಿದಾಯಿತಮ್ಮ

ಮೊಲೆಯಾನ ಕೊಡಲಿ ತಾಯ ನೋಡನಲ್ಲಮ್ಮ

ಅನ್ನವ ಕೊಳಲೊಲ್ಲನಮ್ಮ ಅತಿಭೀತನಾದ ದೈತ್ಯ

ಕನ್ನೆ ಮೊಲೆಹಾಲನುಂಡು ಬೆಳೆದನಲ್ಲಮ್ಮ 2


ನಮ್ಮ ಮಾತು ಕೇಳನಮ್ಮ ಒಮ್ಮೆಗೆ ಮೈಹೊದಿಯ ನಮ್ಮ

ಸುಮ್ಮನೆ ಘೊರಸುತಾನೆ ಮಲಗನಲ್ಲಮ್ಮ

ಬೊಮ್ಮಜೆಟ್ಟಿಗೆ ಮಾಡಿದೆವಮ್ಮ ಒಮ್ಮೆಗಿಷ್ಟೆಲ್ಲವಾಯಿತಮ್ಮ

ನಮ್ಮ ಹಯವದನಗಿನ್ನು ಅಂಜಿಕಿಲ್ಲಮ್ಮ 3

***