..
kruti by shreesha keshava vittala dasaru (subbanna dasa)
ಪರಮ ಸುಗುಣಸಾಂದ್ರ ಗುರುರಾಘವೇಂದ್ರ ಪ
ಕರುಣಾಳೋ ಮುನಿ | ವಂಶಸುಧಾಕರ |
ಗುರುರಾಜ ಪ್ರಭೋ | ಶ್ರೀ ರಾಘವೇಂದ್ರ ಅ.ಪ
ಮುರುಕುಮಂಟಪದೊಳು | ಹರಕುಚಿಂದಿಯನ್ಹೊದ್ದು |
ಉರಿಯ ಬೆಳಕಿನಲ್ಲಿ | ಪರಿಮಳ ರಚಿಸಿದೆ ||
ಗುರುಗಳಾಕ್ಷಣ ಕಂಡು | ಪರಮಸಂಭ್ರಮದಿಂದ |
ಪರಿಮಳಾಚಾರ್ಯನೆಂಬ | ಬಿರುದಿತ್ತು ಕರೆದರೊ 1
ಜಡಮತಿ ಬ್ರಾಹ್ಮಣ | ಮಿಡುಕಿ ನಿರೂಪಿಸೆ |
ವಡನೆ ಗಂಧವ ತೇದೆ | ಅನಲನ ಜಪಿಸುತೆ ||
ಒಡಲ ಬೇಗೆಯಿಂ ಜನರು | ಬಡಬಡಿಸಿದ ಕಂಡು |
ಕಡಲರಸನ ದಯದಿ | ಕಡುಶಾಂತಿ ಇತ್ತೆಯೊ2
ಬಾದರಾಯಣಮುನಿ | ಭೇದಮತವ ಬಿತ್ತೆ |
ಮೋದತೀರ್ಥರು ತರುವ | ಸಾದರಗೈದರೊ ||
ಸ್ವಾದಫಲಂಗಳು | ನಿನ್ನಿಂದ ತೋರ್ದವು |
ಸಾಧುಜನಾರ್ಚಿತ | ಶ್ರೀಶಕೇಶವಪ್ರಿಯ 3
***