ಕಾಖಂಡಕಿ ಶ್ರೀ ಮಹಿಪತಿರಾಯರು
ಕಾಮಧೇನುಗರವುತಲ್ಯದೆ ನಮ್ಮ ಮನಿಯಲಿ ನೋಡಿ ಬ್ರಹ್ಮಾನಂದದೋರುತದೆ ಪರಮಾಮೃತ ಸೂರ್ಯಾಡಿ ಪ
ಭೋರ್ಗರೆವುತಲ್ಯದೆ ಇರುಳ ಹಗಲಿ ತಾ ಕರಕೊಳ್ಳಲಿ ವಶವಲ್ಲ ಅಮೃತ ದುರುಳರಿಗಿದು ಅರಿಕಿಲ್ಲ ಸುರಿ ಸುರಿದು ಸಾರಾಯ ಚಪ್ಪರಿದನುಭವ ನಿಜಸುಖ ತಾ ಬಲ್ಲ ಸುರಮುನಿಜನರಾನಂದದಿ ಸೇವಿಸಿ ಅರಹುತರಾದರು ಎಲ್ಲ 1
ಕಾಸಿ ಕಡಿಯದೇ ಭಾಸುತಲ್ಯದೆ ಲೇಸಾಗಿ ನವನೀತ ಮೋಸಹೋಗದನುಸರಿಸಿಕೊಂಬುದು ವಸುಧಿಯೊಳಗೆ ತ್ವರಿತ ಋಷಿಮುನಿಗಳು ಸ್ವಹಿತ ತುಸುಕೊರತಿಲ್ಲದೆ ಪಸರಿಸಿ ತುಂಬೆದ ವಿಶ್ವದೊಳಗೆ ಸನ್ಮತ2
ಅನುದಿನ ಮಹಿಪತಿಗಿದು ನಿಜ ನೋಡಿ ಮಹಾಮಹಿಮೆಯ ಸವಿಗೂಡಿ ಶಿರದಲಭಯವ ನೀಡಿ ಇಹಪರದೊಳು ಗುರುನಾಮವೆ ಕಾಮಧೇನುವಿದೆ ಕೊಂಡಾಡಿ 3
***