ದೇವಾದಿದೇವಾ ಶ್ರೀಕೃಷ್ಣ ದೇವಕ್ಕಿ ಕಂದ l
ಕಾವದು ಕರುಣದಿಂದಾ ಸಚ್ಚಿದಾನಂದ ll ಪ ll
ಏನೇನರಿಯದ ಮುಗ್ಧೆ ನೀನೊಲಿದು ಇ l
ದೇನು ಸೋಜಿಗ ಮಾಡಿದೆ ದುರ್ಯಶೆ ಬರಿದೆ l
ಶ್ರೀನಾಥ ನಿನ್ನ ನಂಬಿದ ಮಾನಿನಿಯರ l
ಮಾನ ನಿದಾನ ನಿನ್ನದು ಲಾಲಿಸುವದು ll 1 ll
ಕನ್ನಡಿ ಪಿಡಿದು ನೋಡೆ ಕಾಮಿತಪ್ರದ l
ಮನ್ನಣೆಯಿಂದ ತೋರಿದೆ ಮೋಹಬೀರಿದೆ l
ಸನ್ನುತಾಂಗನೆ ಸರ್ವರ ಸರ್ವತ್ರ ವ್ಯಾಪ್ತ l
ಯನ್ನ ರಕ್ಷಿಪದರಿದೆ ನಿನ್ನ ಸೇರಿದೆ ll 2 ll
ಮಾರ ಮಾರ್ಗಣಕ್ಕೆನ್ನನು ಮಾರ್ಮಲವಂತೆ l
ಮಾಡಯ್ಯ ಮಮತೆಯನು ಮದಕವೆನು l
ಸಾರ ಸುಂದರ ಶ್ರೀಪತಿವಿಟ್ಠಲರೇಯ l
ಸಾರಿದವರ ಗೋಪ್ತನೆ ಸಂತರಾಪ್ತನೆ ll 3 ll
***