Tuesday, 13 April 2021

ದೇವಾದಿದೇವಾ ಶ್ರೀಕೃಷ್ಣ ದೇವಕ್ಕಿ ಕಂದ ankita sripati vittala

ದೇವಾದಿದೇವಾ ಶ್ರೀಕೃಷ್ಣ ದೇವಕ್ಕಿ ಕಂದ l

ಕಾವದು ಕರುಣದಿಂದಾ ಸಚ್ಚಿದಾನಂದ ll ಪ ll


ಏನೇನರಿಯದ ಮುಗ್ಧೆ ನೀನೊಲಿದು ಇ l

ದೇನು ಸೋಜಿಗ ಮಾಡಿದೆ ದುರ್ಯಶೆ ಬರಿದೆ l

ಶ್ರೀನಾಥ ನಿನ್ನ ನಂಬಿದ ಮಾನಿನಿಯರ l

ಮಾನ ನಿದಾನ ನಿನ್ನದು ಲಾಲಿಸುವದು ll 1 ll


ಕನ್ನಡಿ ಪಿಡಿದು ನೋಡೆ ಕಾಮಿತಪ್ರದ l

ಮನ್ನಣೆಯಿಂದ ತೋರಿದೆ ಮೋಹಬೀರಿದೆ l

ಸನ್ನುತಾಂಗನೆ ಸರ್ವರ ಸರ್ವತ್ರ ವ್ಯಾಪ್ತ l

ಯನ್ನ ರಕ್ಷಿಪದರಿದೆ ನಿನ್ನ ಸೇರಿದೆ ll 2 ll


ಮಾರ ಮಾರ್ಗಣಕ್ಕೆನ್ನನು ಮಾರ್ಮಲವಂತೆ l

ಮಾಡಯ್ಯ ಮಮತೆಯನು ಮದಕವೆನು l

ಸಾರ ಸುಂದರ ಶ್ರೀಪತಿವಿಟ್ಠಲರೇಯ l

ಸಾರಿದವರ ಗೋಪ್ತನೆ ಸಂತರಾಪ್ತನೆ ll 3 ll

***


No comments:

Post a Comment