ಕಾಖಂಡಕಿ ಶ್ರೀ ಕೃಷ್ಣದಾಸರು
ಶರಣು ಶಿರೀಶ ಹರೇಗೋವಿಂದಾ ಪ
ದಾನವ ಕುಲಸಂಹಾರಕಾ ದೀನ ತಾರಕಾ ದೀನ ತಾರಕಾ ಪರಮ ಪಾವನ ರೂಪಾ 1
ಈರೇಳು ಲೋಕದ ಜೀವನಾ ವರಪಾವನಾ ವಿನುತ ದಯಚರಣಾ2
ಭಯಹರ ಆನಂದಸಾಗರಾ ದಯ ಸಾಗರಾ ದಯಸಾಗರಾ ಗರುಡಗಮನ ವರ ಫಣಿಶಯನಾ3
ದುರಿತ ಕುಲಾಂಬುಧಿ ಶೋಷಣಾ ಖರದೋಷಣಾ ಖರದೋಷಣಾ ತನು ಪರ್ವತ ಕುತಿಲಿಶಾ4
ಸುರವರ ಮುನಿಜನ ಪಾಲನಾ ಧರಿಲೋಲನಾ ಧರಿ ಲೋಲನಾ ರಾಯಣ ಸರಜ ನೇತ್ರಾ5
ರವಿಕೋಟಿ ನಿಧನಂದ ನಂದನಾ ಭವಬಂಧನಾ ಪತಿ ಜನಕಾ6
ಅಸಮ ಪಯೋಧರ ಸುಂದರಾ ದಶಕಂಧರಾ ದಶಕಂಧರಾ, ಮರ್ಧನ ನಿರುಪಮ ಚರಿತಾ7
ಸಕಲ ವ್ಯಾಪಕ ಯದುನಾಯಕಾ ಸುಖದಾಯಕಾ ಸುಖದಾಯಕಾ ಮಹಿಪತಿ ನಂದನ ಪ್ರೀಯಾ8
***