Showing posts with label ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ ಲಾಲಿಸೋ ಭಾರತೀಶಾ gurujagannatha vittala. Show all posts
Showing posts with label ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ ಲಾಲಿಸೋ ಭಾರತೀಶಾ gurujagannatha vittala. Show all posts

Wednesday 1 September 2021

ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ ಲಾಲಿಸೋ ಭಾರತೀಶಾ ankita gurujagannatha vittala

 ..

ಪಾಲಿಸಗಸ್ತ್ಯ ಪುರವಾಸಾ ಸಂತತ ಲೇಸಾ

ಲಾಲಿಸೋ ಭಾರತೀಶಾ ಪ


ಪದ್ಯ

ರವಿಶತ ನಿಭ ಕಾಯಾ, ನಿತ್ಯ ನಿರ್ಧೂತಮಾಯಾ

ಕವಿಜನ ವರಗೇಯಾ, ಕಾಮಿತಾರ್ಥಾಭಿಧೀಯಾ

ದಿವಿಭುವಿ ನಿಜಗೇಯಾ, ನೀತ ಸದ್ಭಕ್ತ ಪ್ರೀಯಾ

ತ್ರಿವಿಧಜನ್ವ ಸುಕಾಯಾ ನಿಲಯ ವಾಙ್ಮನೋ ಪ್ರೀಯಾ

ನಿಗಮ ವಂದಿತ ಮುಖ್ಯಗುಣಧಾಮಾ

ಸ್ವಾಶ್ರಿತಪ್ರೇಮಾತೋಷಿತ ಶ್ರೀರಾಮಾ

ಜಗಕೆ ಜೀವನÀನಾದ ಹನುಮಾ

ಕಾಮದ ಭೀಮಾ ಮೋಕ್ಷದ ಮಧ್ವನಾಮಾ

ಮುಗಿವೆ ಕರದ್ವಯ ನಿಮಗಯ್ಯಾ

ನಮೋ ನತಜೀಯಾ ಸಂತತ ಪಿಡಿ ಕೈಯಾ 1

ಪದ್ಯ

ಜಲರುಹಭವಪೋತಾ ಭೂತನಾಥೈಕತಾತಾ

ಸುಲಲಿತಜನದಾತಾ ಶುದ್ಧಸತ್ತಾ ್ವಧಿನಾಥಾ

ಕಲಿಮಲ ಪ್ರವೀಫಾತಾ ವಿಶ್ವಕೋಶವ್ಯತೀತಾ

ವಿಲುಲಿತ ದಿತಿಜಾತಾ ಧೂತ ಸರ್ವತ್ರಾಭೀತಾ

ಪದ

ಏಕವಿಂಶತಿ ಸಹಸ್ರ ಷಟ್‍ಶತಾ

ಜಪಮಾಡುತಾ ತ್ರಿವಿಧರೊಳಿರುತ

ಎಕೋ ನಾರಾಯಣನುತ್ತಮಾ

ಸರ್ವ ಸುರೋತ್ತಮ ಜೀವಗಣವೆಂಬೋದು ಅಥವಾ

ಎಕೋ ಭಾವಭಕ್ತಿವಿಜ್ಞಾನಾ

ಭವದೊಳು ಜ್ಞಾನಾ ಕಲ್ಪಿಸಿ ಅಜ್ಞಾನಾ

ಏಕವಾಗಿತ್ತು ಸತ್ವರಾ

ಭವದಿಂದ ಮುಕ್ತರಾ ಮಾಡುವಿ ಸತ್ವರಾ 2

ಪದ್ಯ

ಶ್ರುತಿತತಿಸ್ಮøತಿವೇದ್ಯಾ ಸೂತ್ರನಾಮಾಮರಾದ್ಯಾ

ವಿತತವಿಮಲಗಾತ್ರಾ, ವೀಶಶೇಷತ್ರಿನೇತ್ರಾ

ಶತಮಖ ಮುಖಧ್ಯಾತಾ, ಧೀತವೇದಾಂತಜಾತಾ

ಶ್ರುತಿಪಥನಿರಪೇಕ್ಷಾ ಕಾಮಿನಾಂ ಕಲ್ಪವೃಕ್ಷಾ

ಪದ

ವಿಶ್ವೇಶ ವಿಶ್ವಾಂತರಾತುಮಾ

ಚಿÉಚ್ಛುಕಾತುಮಾ ಸರ್ವಜೀವರುತ್ತಮಾ

ವಿಶ್ವಾಸದಿಂದಲಿ ತವಪಾದಾ

ನಂಬಲು ಮೋದ ದಾಯಕ ಮುಕ್ತಿಫಲದಾ

ವಿಶ್ವನಾಟಕ ವಿಷ್ಣುಪದ ಭಕ್ತಾ

ಸಜ್ಜನಸಕ್ತ ಪಾಲಿಸು ನಿನ ಭಕ್ತಾ

ವಿಶ್ವೇಶÀ ಗುರುಜಗನ್ನಾಥ

ವಿಠಲಪದದೂತ ನೀಡಯ್ಯ ಮೋದ 3

***