ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಿಸೋ ಗುರು ತಾರಿಸೋ ಶರಣರಕ್ಷಕ ನಮ್ಮ ಕರುಣಾಕರ ದೇವ ಪ
ಭವ ಜನ್ಮದಲಿ ಬಂದು ಬಹು ಬಳಲಿದೆ ನಾನು ಮೂವಿಧ ಬಲೆಯಲಿ ಸಿಲುಕಿ ಜೀವನವು ಅವಿದ್ಯ ದಾಟಕ ಐವರು ಕೂಡಿ ತಾಂ ಜೀವನ ಮುಕ್ತಿಗಾಣಿಸಗುಡದಿಹರು 1
ಮೂರೊಂದು ಮಂದಿಯ ಸೇರುಗುಡದೆ ಪಥ ಅರುಮಂದಿಯು ಕೂಡಿ ಕಾಡುತಲಿ ಆರುಮತ್ಯೆರಡು ಮಂದಿಯ ಕಾವಲಿಗೆ ನಾನು ಆರಯ್ಯ ಶ್ರೀಗುರು ಶಿರೋಮಣಿಯ 2
ಹತ್ತು ಹೊಳೆಯ ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತವತಾರಿಸಿ ಮೂಢ ಮಹಿಪತಿಯ ಸಂತತಸದ್ಗತಿ ಸುಖ ಈವ ಘನಗಿನ್ನು 3
***