Wednesday, 1 September 2021

ಕರುಣಿಸೋ ಗುರು ತಾರಿಸೋ ಶರಣರಕ್ಷಕ ನಮ್ಮ ಕರುಣಾಕರ ದೇವ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕರುಣಿಸೋ ಗುರು ತಾರಿಸೋ ಶರಣರಕ್ಷಕ ನಮ್ಮ ಕರುಣಾಕರ ದೇವ ಪ  


ಭವ ಜನ್ಮದಲಿ ಬಂದು ಬಹು ಬಳಲಿದೆ ನಾನು ಮೂವಿಧ ಬಲೆಯಲಿ ಸಿಲುಕಿ ಜೀವನವು ಅವಿದ್ಯ ದಾಟಕ ಐವರು ಕೂಡಿ ತಾಂ ಜೀವನ ಮುಕ್ತಿಗಾಣಿಸಗುಡದಿಹರು 1 

ಮೂರೊಂದು ಮಂದಿಯ ಸೇರುಗುಡದೆ ಪಥ ಅರುಮಂದಿಯು ಕೂಡಿ ಕಾಡುತಲಿ ಆರುಮತ್ಯೆರಡು ಮಂದಿಯ ಕಾವಲಿಗೆ ನಾನು ಆರಯ್ಯ ಶ್ರೀಗುರು ಶಿರೋಮಣಿಯ 2 

ಹತ್ತು ಹೊಳೆಯ ಸುತ್ತ ಅಡ್ಡಗಟ್ಟಿಹುದು ಪಥ ನಡಲೀಸದೆ ಇಂತವತಾರಿಸಿ ಮೂಢ ಮಹಿಪತಿಯ ಸಂತತಸದ್ಗತಿ ಸುಖ ಈವ ಘನಗಿನ್ನು 3

***


No comments:

Post a Comment