Showing posts with label ಜನಕ ಪೇಳೆ ಲಕ್ಷ್ಮಣ ಸೀತಾಸಹವನಕೆ ತೆರಳಿದ varadesha vittala. Show all posts
Showing posts with label ಜನಕ ಪೇಳೆ ಲಕ್ಷ್ಮಣ ಸೀತಾಸಹವನಕೆ ತೆರಳಿದ varadesha vittala. Show all posts

Thursday, 1 July 2021

ಜನಕ ಪೇಳೆ ಲಕ್ಷ್ಮಣ ಸೀತಾಸಹವನಕೆ ತೆರಳಿದ ankita varadesha vittala

ಶ್ರೀವರದೇಶವಿಠಲದಾಸರು (ಸಂತೆಕೆಲೂರು) ಅವರ ಕೃತಿ

ಪರಮಾತ್ಮನ ದ್ವಂದ್ವ ಕ್ರಿಯೆಯನ್ನು ಸಾರುವಂಥ ಶ್ರೀರಾಮ ಕೃಷ್ಣರ ಅವತಾರ ಮಹಿಮೆಗಳನ್ನು ದಾಸರು ಬಹು ಸ್ವಾರಸ್ಯವಾಗಿ ಭಕ್ತೋದ್ರೇಕ ವಾಗುವಂತೆ ಸ್ತುತಿಸಿದ್ದಾರೆ. 


ಜನಕ ಪೇಳೆ ಲಕ್ಷ್ಮಣ ಸೀತಾಸಹ _

ವನಕೆ ತೆರಳಿದ ರಾಮಹರೇ _

ವನಕೆ ಪೋಗಿ ತನ್ನಣುಗರೊಡನೆ ಗೋ _

ವನು ಪಾಲಿಪ ಕೃಷ್ಣಹರೇ....


ತಾಟಕೆ ಖರಮಧು ಕೈಟಭಾರಿ _

ಪಾಪಾಟವಿ ಸುರ ಮುಖ ರಾಮಹರೇ _

ಆಟದಿ ಫಣಿ ಮೇಲ್ ನಾಟ್ಯವ ನಾಡಿದ _

ಖೇಟವಾಹ ಶ್ರೀ ಕೃಷ್ಣಹರೇ...


ರಾಮ ರಾಮ ಎಂದ್ನೇಮದಿ ಭಜಿಪರ _

ಕಾಮಿತ ಫಲದ ಶ್ರೀ ರಾಮಹರೇ_

ಪ್ರೇಮದಿ ಭಕ್ತರ ಪಾಲಿಪ ಶ್ರೀ _

ವರದೇಶ ವಿಠ್ಠಲ ಶ್ರೀ ಕೃಷ್ಣ ಹರೇ...

ಜೈ ಜೈ ರಾಮಹರೇ ಜೈ ಜೈ 

ಕೃಷ್ಣಹರೇ _

ರಾಮ ಹರೇ ಹರೇ ರಾಮ ಹರೇ _

ಕೃಷ್ಣ ಹರೇ ಹರೇ ಕೃಷ್ಣ ಹರೇ. 

****