ಶ್ರೀವರದೇಶವಿಠಲದಾಸರು (ಸಂತೆಕೆಲೂರು) ಅವರ ಕೃತಿ
ಪರಮಾತ್ಮನ ದ್ವಂದ್ವ ಕ್ರಿಯೆಯನ್ನು ಸಾರುವಂಥ ಶ್ರೀರಾಮ ಕೃಷ್ಣರ ಅವತಾರ ಮಹಿಮೆಗಳನ್ನು ದಾಸರು ಬಹು ಸ್ವಾರಸ್ಯವಾಗಿ ಭಕ್ತೋದ್ರೇಕ ವಾಗುವಂತೆ ಸ್ತುತಿಸಿದ್ದಾರೆ.
ಜನಕ ಪೇಳೆ ಲಕ್ಷ್ಮಣ ಸೀತಾಸಹ _
ವನಕೆ ತೆರಳಿದ ರಾಮಹರೇ _
ವನಕೆ ಪೋಗಿ ತನ್ನಣುಗರೊಡನೆ ಗೋ _
ವನು ಪಾಲಿಪ ಕೃಷ್ಣಹರೇ....
ತಾಟಕೆ ಖರಮಧು ಕೈಟಭಾರಿ _
ಪಾಪಾಟವಿ ಸುರ ಮುಖ ರಾಮಹರೇ _
ಆಟದಿ ಫಣಿ ಮೇಲ್ ನಾಟ್ಯವ ನಾಡಿದ _
ಖೇಟವಾಹ ಶ್ರೀ ಕೃಷ್ಣಹರೇ...
ರಾಮ ರಾಮ ಎಂದ್ನೇಮದಿ ಭಜಿಪರ _
ಕಾಮಿತ ಫಲದ ಶ್ರೀ ರಾಮಹರೇ_
ಪ್ರೇಮದಿ ಭಕ್ತರ ಪಾಲಿಪ ಶ್ರೀ _
ವರದೇಶ ವಿಠ್ಠಲ ಶ್ರೀ ಕೃಷ್ಣ ಹರೇ...
ಜೈ ಜೈ ರಾಮಹರೇ ಜೈ ಜೈ
ಕೃಷ್ಣಹರೇ _
ರಾಮ ಹರೇ ಹರೇ ರಾಮ ಹರೇ _
ಕೃಷ್ಣ ಹರೇ ಹರೇ ಕೃಷ್ಣ ಹರೇ.
****
No comments:
Post a Comment