Thursday, 1 July 2021

ಬಡವಾ ನಿನಗೊಬ್ಬರಗೊಡವೆ ಏತಕೊ purandara vittala BADAVA NINAGOBBARA GODAVE ETAKO





ಪುರಂದರದಾಸರು


ಬಡವ ನಿನಗೊಬ್ಬರ ಗೊಡವೆ ಯಾತಕ್ಕೋ
ಒಡವೆ ವಸ್ತು ತಾಯಿ ತಂದೆ
ಒಡೆಯ ಕೃಷ್ಣನಿರಲಿಕ್ಕಾಗಿ ||ಪ||

ಮಡದಿ ಮಕ್ಕಳು ಎದುರಿಸಿದರೆ
ಕಡೆಗಣಿಸಿ ಕೈದುಡುಕೀ ಕಂಡ್ಯ
ಅಡಿಕೆಹೋಳಿಗೆ ಹೋದ ಮಾನ
ಆನೆ ಕೊಟ್ಟರೆ ಬಾರದೋ ||

ಒಪ್ಪತ್ತು ಭಿಕ್ಷವ ಬೇಡು
ಒಬ್ಬರಿಗೊಂದಿಷ್ಟು ನೀಡು
ಅಪ್ಪನಾದಚ್ಯುತನ ಪಾಡು
ಆನಂದದಿಂದೋಲಾಡು ||

ಭೋಗ್ಯ(ಯೋಗಕೆ)ಕರ್ಮಂಗಳು ಎಲ್ಲ
ನೀಗಿ ಕಳೆದು ಪೋಗುವ ತನಕ
ಮಾಗಿ ಕೋಕಿಲಯೆಂದದಿ ನೀ
ಮುದುರಿಕೊಂಡಿರು ಒದರಬೇಡ ||

ಓದು ತರ್ಕವೆಲ್ಲ ಭ್ರಾಂತಿ
ಆದಿದೇವನ ಕಾನದನಕ
ಬೂದಿ ಮುಚ್ಚಿದ ಕೆಂಡದಂತೆ
ಬುದ್ಧೀಲಿರು ನಾ ಹೇಳೇನಂತೆ ||

ದೊರೆತನವಿದ್ದೇನು ಹೆಚ್ಚು
ಸಿರಿತನವಿದ್ದೇನು ಮೆಚ್ಚು
ವರದಪುರಂದರವಿಠಲನ್ನ
ನರದೇಹದಲಿ ನೋಡದನಕ ||
***


pallavi

baDava ninagobbara goDave yAtakkO oDave vastu tAyi tande oDeya krSNaniralikkAgi

caraNam 1

maDadi makkaLu edurisidare kaDegaNisi kaiduDagI kaNDya aDikehOLige hOda mAna Ane koTTare bAradO

caraNam 2

oppattu bhIkSava bEDu obbarigondiSTu nIDu appanAdacyutana pADu AnandadindOlADu

caraNam 3

bhOgya karmangaLa ella nIgi pOguva tanaka mAgi kOkilayendadi nI mudurikoNDiru odarabEDa

caraNam 4

Odu tarkavella bhrAnti AdidEvana kAnadanaka bUdi muccida koNDadante buddhiliru nA hELanante

caraNam 5

doretanaviddEnu heccu siritanaviddEnu meccu varada purandara viTTalanna nara dEhadali nODadanaka
***

ಬಡವಾ ನಿನಗೊಬ್ಬರಗೊಡವೆ ಏತಕೊ |
ಒಡವೆ ವಸ್ತು ತಾಯಿತಂದೆ ಒಡೆಯ ಕೃಷ್ಣನೆಂದು ನಂಬೋ ಪ.

ಒಪ್ಪತ್ತು ಭಿಕ್ಷವ ಬೇಡು, ಒಬ್ಬರಿಗೆ ಒಂದಿಷ್ಟು ನೀಡು |ಅಪ್ಪನಾದಚ್ಯುತನ ನೋಡು, ಆನಂದದಲಿ ಪೂಜೆಮಾಡು 1

ಮಡದಿ ಮಕ್ಕಳು ಹೆದರಿಸಿದರೆ ಮುಂಕೊಂಡು ನೀಅಡಕೆಯ ಹೋಳಿಗೆ ಹೋದ ನಾಚಿಕೆ ಆನೆಯಬಲ್ಲೆ ನಿನ್ನ ಎಲ್ಲ ಮಾತು ಕ್ಷುಲ್ಲಕತನದ ಭ್ರಾಂತು |ಎಲ್ಲರ ಮನೆಯ ದೋಸೆ ತೂತು ಅಲ್ಲವೇನುವೇದ - ತರ್ಕವೆಲ್ಲವು ಭ್ರಾಂತಿ -ಬೂದಿಮುಟ್ಟಿದ ಕೆಂಡದಂತೆ ಬುದ್ಧಿಯಲಿರುದೊರೆತನವು ಏನು ಹೆಚ್ಚು - ಸಿರಿಯು ಏನುವರದ ಪುರಂದರವಿಠಲರಾಯನು ಪರಿಪಾಲಿಪನೆಂದು ನಚ್ಚು
****

ರಾಗ ಮಧ್ಯಮಾವತಿ. ಅಟ ತಾಳ - raga in audio may differ

No comments:

Post a Comment