Showing posts with label ಇಂದು ಶುಕ್ರವಾರ ಶುಭವ ತರುವ ವಾರ others. Show all posts
Showing posts with label ಇಂದು ಶುಕ್ರವಾರ ಶುಭವ ತರುವ ವಾರ others. Show all posts

Friday, 27 December 2019

ಇಂದು ಶುಕ್ರವಾರ ಶುಭವ ತರುವ ವಾರ others

ಸರ್ವ ಮಂಗಲ ಮಾಂಗಲ್ಯೇ ಶಿವೇ ಸರ್ವಾರ್ತ ಸಾಧಕೇ
ಶರಣ್ಯೇ ತ್ರಯ೦ಬಕೇ ಗೌರಿ ನಾರಾಯಣೀ ನಮೋಸ್ತುತೇ ||ಧೃ||

ಇಂದು ಶುಕ್ರವಾರ ಶುಭವ ತರುವ ವಾರ
ಸುಮಂಗಲಿಯರೆಲ್ಲಾ ನಿನ್ನ ಪೂಜಿಸುವ ಪುಣ್ಯವಾರ ||ಪ||

ಮುಂಜಾನೆಯ ಮಡಿಯುಟ್ಟು
ಕುಂಕುಮವ ಹಣೆಗಿಟ್ಟು
ರಂಗೋಲಿಯನು ಬಾಗಿಲಿಗಿಟ್ಟು
ಹಣ್ಣುಕಾಯಿ ನೀಡುವ ವಾರ ||೧||

ಮಲ್ಲಿಗೆ ಜಾಜಿ ಹೂಮಾಲೆ ಹಾಕಿ
ಚಂದನ ಹಚ್ಚಿ ಸಿಂಗಾರ ಮಾಡಿ
ಕರ್ಪೂರದಾರತಿ ನಿನಗೆ ಬೆಳಗಿ
ಭಕ್ತಿಯಿ೦ದಲಿ ಭಜಿಸುವ ವಾರ ||೨||

ಸುವಾಸಿನಿಯರಿಗೆ ಕುಂಕುಮ ಹಚ್ಚಿ
ಸಂಭ್ರಮದಿ೦ದ ಬಾಗಿನ ನೀಡಿ
ಸರ್ವ ಮಂಗಲೆಯ ಕೀರ್ತಿಯ ಹಾಡಿ
ಸಕಲ ಭಾಗ್ಯವ ಬೇಡುವ ವಾರ  ||೩||
*********