ರಾಗ ಮಧ್ಯಮಾವತಿ ಆದಿತಾಳ
ನೆನೆಬೇಕು ನೆನೆಬೇಕು ನೆನೆಯಬೇಕಮ್ಮ||ಪ||
ಮನದ ಚಪಲ ಬುದ್ಧಿ ಇನ್ನು ಬಿಡದಮ್ಮ ||ಅ||
ಎಡೆಬಿಡದಲೆ ನಿನ್ನ ಒಡಲ ಚಿಂತಿಸುವೆ
ಕಡಲಶಯನನ ನಾಮ ಬಿಡದೆ ಹಗಲಿರುಳು ||
ಹೊತ್ತು ಹೋಯಿತು ಇನ್ನು ವ್ಯರ್ಥವಾಗುವುದು
ಹತ್ತಿಲೆ ಇಹುದು ಕಣ್ಣೆತ್ತಿ ನೋಡಿದರೆ ||
ಇಂದಿರಾರಮಣ ಶ್ರೀಪುರಂದರ ವಿಠಲ
ಮಂದರೋದ್ಧರನ ಆನಂದಯೆಂದೆಣಿಸಿ ||
***
ನೆನೆಬೇಕು ನೆನೆಬೇಕು ನೆನೆಯಬೇಕಮ್ಮ||ಪ||
ಮನದ ಚಪಲ ಬುದ್ಧಿ ಇನ್ನು ಬಿಡದಮ್ಮ ||ಅ||
ಎಡೆಬಿಡದಲೆ ನಿನ್ನ ಒಡಲ ಚಿಂತಿಸುವೆ
ಕಡಲಶಯನನ ನಾಮ ಬಿಡದೆ ಹಗಲಿರುಳು ||
ಹೊತ್ತು ಹೋಯಿತು ಇನ್ನು ವ್ಯರ್ಥವಾಗುವುದು
ಹತ್ತಿಲೆ ಇಹುದು ಕಣ್ಣೆತ್ತಿ ನೋಡಿದರೆ ||
ಇಂದಿರಾರಮಣ ಶ್ರೀಪುರಂದರ ವಿಠಲ
ಮಂದರೋದ್ಧರನ ಆನಂದಯೆಂದೆಣಿಸಿ ||
***
pallavi
nene bEku nene bEka neneya bEkamma
anupallavi
manada capala buddhi innu biDadamma
caraNam 1
eDe biDadale ninna oDala cintisuve kaDala shayanana nAma biDade hagaliruLu
caraNam 2
hottu hOyitu innu vyarttavAguvudu hattile ihudu kaNNetti nODidare
caraNam 3
indirA ramaNa shrI purandara viTTala mandarOddharana AnandayendeNisi
***