RSS song .
ವಿರಸವ ಮರೆತು ಸರಸದಿ ಬೆರೆತು ಅಭಿನವ ಭಾರತ ಕಟ್ಟೋಣ
ತರತಮವಿಲ್ಲದ ಸಮರಸ ಭಾವದಿ ಸ್ವರ್ಗವನಿಲ್ಲೇ ರಚಿಸೋಣ ||ಪ||
ಮೇಲು-ಕೀಳುಗಳ ಕಿತ್ತೊಗೆದು ಸರ್ವಸಮಾನತೆ ಸಾಧಿಸುವಾ
ಏಳು-ಬೀಳುಗಳ ಹಾದಿಯಲಿ ಎದೆಗುಂದದೆ ನಾವ್ ಮುನ್ನಡೆವಾ ||೧||
ಮಾನವ ನಿರ್ಮಿತ ಭೇಧಗಳು ಧರ್ಮದ ಅನುಮತಿ ಅದಕಿಲ್ಲ
ನಾಡಿನ ನೈಜ ಸುಧಾರಣೆಗೆ ಅನ್ಯರ ಆಶ್ರಯ ಬೇಕಿಲ್ಲ ||೨||
ಜಾತೀಯತೆಯನು ಕಿತ್ತೊಗೆದು ರಾಷ್ಟ್ರೀಯತೆಯನು ಬಲಪಡಿಸಿ
ಹಿಂದುತ್ವದ ಹೊಂಬೆಳಕಿನಲಿ ಕತ್ತಲ ಕಾಲವ ಕೊನೆಗೊಳಿಸಿ ||೩||
***
virasava maretu sarasadi beretu aBinava BArata kaTTONa
taratamavillada samarasa BAvadi svargavanillE racisONa ||pa||
mElu-kILugaLa kittogedu sarvasamAnate sAdhisuvA
ELu-bILugaLa hAdiyali edeguMdade nAv munnaDevA ||1||
mAnava nirmita BEdhagaLu dharmada anumati adakilla
nADina naija sudhAraNege anyara ASraya bEkilla ||2||
jAtIyateyanu kittogedu rAShTrIyateyanu balapaDisi
hiMdutvada hoMbeLakinali kattala kAlava konegoLisi ||3||
***