..by ಗುರುಪ್ರಾಣೇಶ ವಿಠಲ
ಶ್ರೀ ಪ್ರಾಣೇಶದಾಸಾರ್ಯರ ಸ್ತುತಿ
ತೆರಳಿದರು ಪರಮ ತೋಷದಲಿ ಹರಿಪರಕೆ |ಹರಿಪ್ರೀಯರಾದ ಪ್ರಾಣೇಶದಾಸರು ತ್ವರದಿ ಪ
ನಿರುತದಲಿ ಹರಿಪೂಜೆ |ಮರಿಯದಲಿ ಮಾಡಿ ಬಲು |ಸ್ಥಿರ ಬುದ್ಧಿ ಪೂರ್ವಕದಲಿ |ಗುರುಗಳಲಿ ಸರ್ವಜ್ಞರಾಯರಿಂದಧಿಕ ಮ ||ತ್ತಿರಲುಂಟೆ ಎಂದು ತಿಳುಹಿ |ದುರುಳ ಜನರನುಸರಿಸದಲೆ ಕವಿಗಳೊಡನಾಡಿ |ಚರಿಸಿ ದೇಶಗಳಲ್ಲಿ ಮೆರೆದು ಖ್ಯಾತಿಯ ಪಡದು 1
ಭಾಗವತ ಶ್ರೇಷ್ಟ ಜಗನ್ನಾಥ ದಾಸಾಖ್ಯರಡಿ |ಜಾಗುಮಾಡದಲರ್ಚಿಸಿ |ಭೋಗಿವರ ಶಯನ ಪ್ರಾಣೇಶವಿಠಲಾಂಕಿತವ ||ಆ ಗುರುಗಳಿಂದ ಕೊಂಡು |ರಾಗದ್ವೇಷಗಳೆಂಬ ಅರಿಗಳನು ಸಂಹರಿಸಿ |ರಾಗದಲಿ ಹರಿಕಥನ ಕವನ ರೂಪದಿ ಪೇಳಿ2
ಪ್ರಾಣಮತವನನುಸರಿಸಿ ಆಚರಣಿಯನು ಮಾಡಿ |ಪ್ರಾಣಿಗಳಿಗೆ ತಿಳಿಸದೆ |ಕ್ಷೋಣಿಯೊಳಗಿನ್ನು ಇರಸಾಕೆಂದು ಆ |ಚಿತ್ರಭಾನು ಆಶ್ವಯುಜ ಶುದ್ಧ ಸಪ್ತಮಿಯಲಿ ||e್ಞÁನಪೂರ್ವಕ ಲಯ ಚಿಂತನೆಯ ಮಾಡಿ ಗುರು |ಪ್ರಾಣೇಶ ವಿಠಲನಿದ್ದಾ ಪುರಕೆ ಜವದಿಂದ3
****