Showing posts with label ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಇಂದ್ರಿಯಂ purandara vittala RAAMA RAAMA RAAMA SEETA RAAMA ENNIRO INDRIYAM. Show all posts
Showing posts with label ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಇಂದ್ರಿಯಂ purandara vittala RAAMA RAAMA RAAMA SEETA RAAMA ENNIRO INDRIYAM. Show all posts

Wednesday 22 December 2021

ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಇಂದ್ರಿಯಂ purandara vittala RAAMA RAAMA RAAMA SEETA RAAMA ENNIRO INDRIYAM





ರಾಮ ರಾಮ ರಾಮ ರಾಮ ರಾಮ ಎನ್ನಿರೋ |ಸೀತಾ|
ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ ||

ಭರದಿ ಯಮನ ಭಟರು ಬಂದು ಹೊರಡು ಎಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ ಹರಿಯ ಧ್ಯಾನ ಬಾರದಯ್ಯ ||

ಇಂದ್ರಿಯಂಗಳೆಲ್ಲ ಕೂಡಿ ಬಂದು ತನುವ ಮುಸುಕಿದಾಗ
ಸಿಂಧು ಸುತೆಯ ಪತಿಯ ನಾಮ ಅಂದಿಗೊದಗಲರಿಯದಯ್ಯ ||

ಶ್ವಾಸೋಛ್ವಾಸವೆರಡು ಕಂಠ ವಾಸವಾಗಿ ಸಿಲುಕಿದಾಗ
ವಾಸುದೇವ ಕೃಷ್ಣನ ನಾಮ ಆ ಸಮಯಕೊದಗದಯ್ಯ ||

ಶೃಂಗಾರದ ದೇಹವೆಲ್ಲ ಅಂಗಬಡಿದು ಮುರಿದು ಬಿದ್ದು
ಕಂಗಳಿಗಾತ್ಮ ಸೇರಿದಾಗ ಶ್ರೀ ರಂಗನ ನಾಮ ಒದಗದಯ್ಯ ||

ವಾತ ಪಿತ್ತವೆರಡು ಕೂಡಿ ಶ್ಲೇಷ್ಮ ಬಂದು ಒದಗಿದಾಗ
ಧಾತುಗುಂದಿದಾಗ ರಘುನಾಥ ಧ್ಯಾನ ಒದಗದೋ ||

ಕಲ್ಲು ಮರನಂತೆ ಜೀವ ನಿಲ್ಲದಂತೆ ಮರಣ ವ್ಯಾಳೆ
ಫುಲ್ಲನಾಭ ಕೃಷ್ಣನೆಂಬೊ ಸೊಲ್ಲು ಬಾಯಿಗೊದಗದಯ್ಯ ||

ಭ್ರಷ್ಟ ಜನ್ಮದಲ್ಲಿ ಬಂದು ದುಷ್ಟ ಕರ್ಮಗಳನೆ ಮಾಡಿ
ಬಿಟ್ಟು ಹೋಗ್ವ ಸಮಯ ಪುರಂದರ ವಿಠ್ಠಲ ನಾಮ ಒದಗದಯ್ಯ ||
***

rAma rAma rAma rAma rAma ennirO |sItA|

nEmadiMda bhajisuvavara kAmitagaLa koDuva nAma ||

bharadi yamana bhaTaru baMdu horaDu eMdu meTTi tuLidu
koraLigAtma sEridAga hariya dhyAna bAradayya ||

iMdriyaMgaLella kUDi baMdu tanuva musukidAga
siMdhu suteya patiya nAma aMdigodagalariyadayya ||

shvAsOChvAsaveraDu kaMTha vAsavAgi silukidAga
vAsudEva kRuShNana nAma A samayakodagadayya ||

shRuMgArada dEhavella aMgabaDidu muridu biddu
kaMgaLigAtma sEridAga shrI raMgana nAma odagadayya ||

vAta pittaveraDu kUDi shlEShma baMdu odagidAga
dhAtuguMdidAga raghunAtha dhyAna odagadO ||

kallu maranaMte jIva nilladaMte maraNa vyALe
phullanAbha kRuShNaneMbo sollu bAyigodagadayya ||

bhraShTa janmadalli baMdu duShTa karmagaLane mADi
biTTu hOgva samaya puraMdara viThThala nAma odagadayya ||
***

ರಾಮ ರಾಮ ರಾಮ ಸೀತಾರಾಮ ಎನ್ನಿರೋ ||ಪ||
(ನೇಮದಿಂದ ಭಜಿಸುವವರ ಕಾಮಿತಗಳ ಕೊಡುವ ನಾಮ )
ಅಮರಪತಿಯ ದಿವ್ಯ ನಾಮ ಅಂದು ಒದಗದೊ ||ಅ||

ಭರದಿ ಯಮನ ಭಟರು ಬಂದು
ಹೊರಡುಯೆಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ
ಹರಿಯ ಧ್ಯಾನ ಒದಗದೊ(/ಬಾರದಯ್ಯಾ)||

ಇಂದ್ರಿಯಂಗಳೆಲ್ಲ ಕೂಡಿ
ಬಂದು ತನುವ ಮುಸುಕುವಾಗ
ಸಿಂಧುಸುತೆಯ ಪತಿಯ ನಾಮ
ಅಂದಿಗೊದಗಿಬಾರದೊ
(/ಅಂದಿಗೊದಗಲರಿಯದಯ್ಯ)||

ಶ್ವಾಸಖಾಸವೆರಡು ಕಂಠ
ದೇಶದಲ್ಲಿ ಸೇರಿದಾಗ
(/ವಾಸವಾಗಿ ಸಿಲುಕಿದಾಗ)
ವಾಸುದೇವನೆಂಬ ನಾಮ
ಆ ಸಮಯಕ್ಕೊದಗದೊ||

ಶೃಂಗಾರದ ದೇಹವೆಲ್ಲ
ಅಂಗ ಮುರಿದು ಬೀಳುವಾಗ
ಕಂಗಳಿಗಾತ್ಮ ಸೇರಿದಾಗ
ರಂಗನ ಧ್ಯಾನ ಒದಗದೊ ||

ವಾತ ಪಿತ್ತವೆರಡು ಕೂಡಿ
ಶ್ಲೇಷ್ಮ ಬಂದು ಒದಗಿದಾಗ
(/ಈ ತನುವನಾವರಿಸಿ)
ಧಾತುಗುಂದಿದಾಗ ರಘು-
ನಾಥನ ಧ್ಯಾನ ಒದಗದೊ ||

ಕಲ್ಲು ಮರನಾಗಿ ಜ್ಞಾನ
ವಿಲ್ಲದಾಗ ಮರಣವೊದಗೆ
ಫುಲ್ಲನಾಭ ಕೃಷ್ಣನೆಂಬ
ಸೊಲ್ಲು ಬಾಯಿಗೊದಗದೊ ||

ಕೆಟ್ಟ ಜನ್ಮದಲ್ಲಿ ಹುಟ್ಟಿ
ದುಷ್ಟಕರ್ಮ ಮಾಡಿ ದೇಹ
ಬಿಟ್ಟು ಹೋಗುವಾಗ ಪುರಂದ್ರ
ವಿಠಲನ ಧ್ಯಾನ ಒದಗದೊ ||
****

ರಾಗ ಜಂಜೂಟಿ ರೂಪಕತಾಳ (raga, taala may differ in audio)

Raama raama raama seetaa raamaa enniro || pa ||


Amarapatiya divya naama andu odagado || a. Pa.||


Bharadi yamana bhataru bandu |

Horadirendu metti muriye |

Koraligaatma seridaaga |

Hariya naama odagado || 1 ||


Shwaasa khaasaveradu kantha |

Dehadalli seridaaga |

Vaasudevanembo naama |

Aa samayake odagado || 2 ||


Kallu maranaagi j~jaana |

Villadaaga marana odage |

Phullanaabha krushnanemba |

Sollu baayige odagado || 3 ||


Ketta janmadalli hutti |

Dushta karmagala maadi deha |

Bittu hoguvaaga purandaraviththalana |

Dhyaana vadagado || 4 ||

***


Vasanta-Aadi-Purandaradasa

17 sooryakaantam janya

Aa: S M1 G3 M1 D2 N3 S

Av: S N3 D2 M1 G3 R1 S 

(lyrics below differs with audio)

rAma rAma rAma rAma rAma ennirO sItA (rAma)


nEmadinda bhajisuvavara kAmitagaLa koDuva nAma(rAma)


kallinante iruva jIva nilladante maraNa vyALE


pullanAbha krSNanembo sollu bAyige odagadO(rAma)?


vAta pittaveraDu kUDi-shlEkSma bandu odagidAga


dhAtu kundidAga raghu-nAthanendu odagadO (rAma)


ihadalli iSta uNTu paradalli sukha vuNTu

vara purandara viThalanna- smarane bAyige odagadO (rAma)?

***


Meaning:

p: say all you (enniro) rama rama sita


A: This name, when regularly chanted(nEmadinda) will will grant (KoDuva) (all) wishes(kAmita) of (all) chanters(bhajisuvavara –all those who pray)


C1: (though) this body(jiva) looks rock solid(kallinante), it cannot stand(nilladante) death(maraNa); (why – in spite of that) the name of pullanabha krishna’s name(sollu) does not (bArado) to ones mouth(bAyige)? [Note: the word vyAle does not appear to be from the original – but is not very significant]


C3: (If one chants the name of rama) there is (untu) satisfaction of ones wishes(iSta) in this world(Ihadalli) and happiness(sukha) in the other world(paradalli), (even then) why the chanting (smarane) of vara purandaravithala’s (name) does not come(odagadO) does not come in the mouth(bAyige)?

***



ರಾಮ ರಾಮ ರಾಮ ರಾಮ 
ರಾಮ ಎನ್ನಿರೋ |ಸೀತಾ|
ನೇಮದಿಂದ ಭಜಿಸುವವರ 
ಕಾಮಿತಗಳ ಕೊಡುವ ನಾಮ ||

ಭರದಿ ಯಮನ ಭಟರು ಬಂದು 
ಹೊರಡು ಎಂದು ಮೆಟ್ಟಿ ತುಳಿದು
ಕೊರಳಿಗಾತ್ಮ ಸೇರಿದಾಗ 
ಹರಿಯ ಧ್ಯಾನ ಬಾರದಯ್ಯ ||

ಇಂದ್ರಿಯಂಗಳೆಲ್ಲ ಕೂಡಿ ಬಂದು 
ತನುವ ಮುಸುಕಿದಾಗ
ಸಿಂಧು ಸುತೆಯ ಪತಿಯ ನಾಮ 
ಅಂದಿಗೊದಗಲರಿಯದಯ್ಯ ||

ಶ್ವಾಸೋಛ್ವಾಸವೆರಡು ಕಂಠ 
ವಾಸವಾಗಿ ಸಿಲುಕಿದಾಗ
ವಾಸುದೇವ ಕೃಷ್ಣನ ನಾಮ 
ಆ ಸಮಯಕೊದಗದಯ್ಯ ||

ಶೃಂಗಾರದ ದೇಹವೆಲ್ಲ ಅಂಗಬಡಿದು 
ಮುರಿದು ಬಿದ್ದು
ಕಂಗಳಿಗಾತ್ಮ ಸೇರಿದಾಗ 
ಶ್ರೀ ರಂಗನ ನಾಮ ಒದಗದಯ್ಯ ||

ವಾತ ಪಿತ್ತವೆರಡು ಕೂಡಿ 
ಶ್ಲೇಷ್ಮ ಬಂದು ಒದಗಿದಾಗ
ಧಾತುಗುಂದಿದಾಗ ರಘುನಾಥ 
ಧ್ಯಾನ ಒದಗದೋ ||

ಕಲ್ಲು ಮರನಂತೆ ಜೀವ 
ನಿಲ್ಲದಂತೆ ಮರಣ ವ್ಯಾಳೆ
ಫುಲ್ಲನಾಭ ಕೃಷ್ಣನೆಂಬೊ 
ಸೊಲ್ಲು ಬಾಯಿಗೊದಗದಯ್ಯ ||

ಭ್ರಷ್ಟ ಜನ್ಮದಲ್ಲಿ ಬಂದು 
ದುಷ್ಟ ಕರ್ಮಗಳನೆ ಮಾಡಿ
ಬಿಟ್ಟು ಹೋಗ್ವ ಸಮಯ 
ಪುರಂದರ ವಿಠ್ಠಲ ನಾಮ ಒದಗದಯ್ಯ ||
********


ರಾಮ ರಾಮ ರಾಮ ಸೀತಾ ರಾಮ ಎನ್ನಿರೋ ಪ.

ಇಂದ್ರಿಯಂಗಳೆಲ್ಲ ಕೂಡಿಬಂದು ತನುವ ಮುಸುಕಲುಸಿಂಧು ಸುತೆಯ ಪತಿಯಧ್ಯಾನಎಂದಿಗಲ್ಲಿ ದೊರೆಯದೊ 1

ಭರದಿ ಯಮನ ಭಟರಾಗಲೆಹೊರಡು ಎಂದು ಮೆಟ್ಟಿ ತುಳಿಯೆಕೊರಳಿಗಾತ್ಮ ಸೇರಿದಾಗಹರಿಯ ಧ್ಯಾನ ದೊರೆಯದೊ 2

ದೋಷಕ್ಲೇಶ - ದುಃಖವೆಂಬಶ್ಲೇಷ್ಮದಲ್ಲಿ ಸಿಕ್ಕಿ ಇರಲುವಾಸುದೇವ ಕೃಷ್ಣನೆಂಬುದಾಸಮಯಕ್ಕೆ ದೊರೆಯದೊ 3

ಸಿಂಗಾರವಾದ ದೇಹವೆಲ್ಲಅಂಗವಳಿದು ಮುರಿದು ಬೀಳೆ ||ಅಂಗಳಿಗಾತ್ಮ ಸೇರಿದಾಗರಂಗನ ಧ್ಯಾನವು ದೊರೆಯದೊ 4

ಕೆಟ್ಟ ಕೆಟ್ಟರಲ್ಲೊ ಬರಿದೆಕಟ್ಟ ಕಡೆಯಲ್ಲಿಕಾಯಬಿಟ್ಟು ಹೋಗುವಾಗಪುರಂದರವಿಠಲ ಧ್ಯಾನ ದೊರೆಯದೊ 5
*********