ವಂದಿಸು ಶ್ರೀ ಹರಿಯ ಪ
ಇಂದಿರೆನಾಥ ಮಹೇಂದ್ರ ಪರಾತ್ವರ
ಸುಂದರ ಜಗಪಿತ ನಂದ ಮಹೋದಧಿ
ಕಂದರ ನಾಯಕ ಸಿಂಧು ಶಯನ ಅರ-
ವಿಂದ ಸುನಾಭ ಮುಕುಂದ ಮುರಾರಿಯ ಅ.ಪ.
ವೇದಸುಗೋಚರ _ ಖೇದವಿವರ್ಜಿತ _ ಸಾದರನುತಿಪರ
ಮೋದಸುದಾಯಕ _ ಮೇದಿನಿವರಭವ _
ಖೇದವಿಮೋಚಕ
ಮಾಧವ ಗೀತಾ _ ಬೋಧಕ ವಿಧಿಗುರು 1
ಅಕ್ಷರ ನಿಖಿಳಾ _ ಧ್ಯಕ್ಷ ನಿರಂಜನ _ ಪಕ್ಷಿ ಧ್ವಜ ಜಗ
ಕುಕ್ಷಿ ಪರಾಮೃತ _ ರಕ್ಷಿಸಿ ಜಗವಂ
ಭಕಿÀ್ಷಪಧೋಕ್ಷಜ _ ಸಾಕ್ಷಿ ನಿರಪೇಕ್ಷ ಸುಪಕ್ಷನ2
ಸತ್ಯಾಧಾರ ವಿಚಿತ್ರ ಗುಣಾರ್ಣವ _ ಸತ್ಯವ್ರತ ಪುರು
ಷೋತ್ತಮ ನಿರ್ಮಲ_ ಸತ್ಯವತೀಸುತ _ ನಿತ್ಯತೃಪ್ತ ಮ
ಹಾತ್ಮಜಗಾತತ _ ಭೂತಿದ ಹೃಸ್ಥನ 3
ಸೋಮಕರಿಪು ಸುರಸ್ತೋಮ ಸಹಾಯಕ _
ಭೂಮಿಯ ವರಜಯ
ಕ್ಷೇಮದ ವಾಮನ _ ಭೀಮ ಪರಾಕ್ರಮ _
ಭೂಮಿಜೆನಾಥಸು
ಧಾಮಸಖಖಳಭ್ರಾಮಕ ಕಲ್ಕಿಯೆ4
ಶಿಷ್ಠ ಸುಪೋಷಕ &shಥಿ;&shಥಿ;&shಥಿ;&shಥಿ;&shಥಿ;&shಥಿ; _ ದುಷ್ಟವಿನಾಶಕ _
ತುಷ್ಠಿ ಮಾಯಾ ಪರ-
ಮೇಷ್ಠ ಜನಕ- ಶ್ರೀ ಕೃಷ್ಣವಿಠಲಪದ
ನಿಷ್ಠರ ಸೇರಿ ವಿಶಿಷ್ಠ ಸಮರ್ಪಿಸಿ 5
***