Showing posts with label ಕರುಣದಿಂದಲಿ ಒಲಿದು ಕಂಡನಾತುರದಲಿ vijaya vittala. Show all posts
Showing posts with label ಕರುಣದಿಂದಲಿ ಒಲಿದು ಕಂಡನಾತುರದಲಿ vijaya vittala. Show all posts

Thursday, 17 October 2019

ಕರುಣದಿಂದಲಿ ಒಲಿದು ಕಂಡನಾತುರದಲಿ ankita vijaya vittala

ಕಾಮದೇವ
ಕರುಣದಿಂದಲಿ ಒಲಿದು ಕಂಡನಾತುರದಲಿ ಪ

ಇಂದ್ರಸಮಾನ ದೇವತೆಯೆ ರತಿಪತಿಯೇ |
ಮಾರ ||
ಬಂದು ಕಲ್ಪದಲಿ ಸುಂದರನೆನಿಸಿಕೊಂಡಿರ್ದ |
ಬಂಧುವೇ ಅಹಂಕಾರ ಪ್ರಾಣನಿಂದಧಿಕನೆ 1

ವನಜ ಸಂಭವನು ಸೃಷ್ಟಿ ಸೃಜಿಪಗೋಸುಗ |
ಮನದಲ್ಲಿ ಪುಟ್ಟಿಸೆ ಚತುರ ಜನರ ||
ಮುನಿಗಳೊಳಗೆ ನೀ ಸನತ್ಕುಮಾರನಾಗಿ ಜನಿಸಿ |
ಯೋಗ ಮಾರ್ಗದಲ್ಲಿ ಚಲಿಸಿದ ಕಾಮಾ 2

ತಾರಕಾಸುರನೆಂಬ ಬಹು ದುರುಳತನದಲ್ಲಿ |
ಗಾರುಮಾಡುತಲಿರಲು ಸುರಗಣವನು ||
ಗೌರಿಮಹೇಶ್ವರರಿಗೆ ಪುತ್ರನಾಗಿ ಪುಟ್ಟಿ |
ಧಾರುಣಿಯೊಳಗೆ ಸ್ಕಂದನೆನಿಸಿದೆ 3

ಮತ್ಸ್ಯ ಉದರದಲಿ |
ಪೊಕ್ಕು ಶಿಶುವಾಗಿ ಸತಿಯಿಂದ ಬೆಳೆದು ||
ರಕ್ಕಸ ಶಂಬರನೊಡನೆ ಕಾದಿ ಗೆದ್ದು ಮರಳಿ |
ಚಕ್ಕನೆ ಸಾಂಬನೆನಿಸಿದೆ ಜಾಂಬವತಿಯಲ್ಲ 4

ಜನಪ ದಶರಥನಲ್ಲಿ ಭರತನಾಗಿ ಪುಟ್ಟಿದೆ |
ಮನೋ ವೈರಾಗ್ಯ ಚಕ್ರಾಭಿಮಾನಿ ||
ಎನಗೊಲಿದ ವಿಜಯವಿಠ್ಠಲರೇಯನಂಘ್ರಿ |
ಅರ್ಚನೆ ಮಾಡುವ ಸುಬ್ರಮಣ್ಯ ಬಲು ಧನ್ಯ 5
*********