Showing posts with label ಅಡಿಗೆಯನು ಮಾಡಬೇಕಣ್ಣ neleyadikeshava ADUGEYANU MAADABEKANNA ಮುಂಡಿಗೆ MUNDIGE. Show all posts
Showing posts with label ಅಡಿಗೆಯನು ಮಾಡಬೇಕಣ್ಣ neleyadikeshava ADUGEYANU MAADABEKANNA ಮುಂಡಿಗೆ MUNDIGE. Show all posts

Tuesday, 15 October 2019

ಅಡಿಗೆಯನು ಮಾಡಬೇಕಣ್ಣ ankita neleyadikeshava ADUGEYANU MAADABEKANNA ಮುಂಡಿಗೆ MUNDIGE



ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ
ಅಡಿಗೆಯನು ಮಾಡಬೇಕಣ್ಣ ||ಪ||

ಅಡಿಗೆಯನು ಮಾಡಬೇಕಣ್ಣ , ಮದಿಸಬೇಕು ಮದಗಳನ್ನು
ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ ||ಅ.ಪ||

ತನ್ನ ಗುರುವನು ನೆನೆಯಬೇಕಣ್ಣ , ತನುಭಾವವೆಂಬ
ಭಿನ್ನ ಕಶ್ಮಲವಳಿಯಬೇಕಣ್ಣ
ಒನಕೆಯಿಂದ ಕುಟ್ಟಿ ಕೇರಿ ತನಗೆ ತಾನೆ ಆದ ಕೆಚ್ಚ -
ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ||೧||

ತತ್ವಭಾಂಡವ ತೊಳೆಯಬೇಕಣ್ಣ , ಸತ್ಯಾತ್ಮನಾಗಿ
ಅರ್ತಿ ಅಕ್ಕಿಯ ಮಥಿಸಬೇಕಣ್ಣ
ಕತ್ತರಿ ಮನವೆಂಬ ಹೊಟ್ಟನ್ನು ಎತ್ತಿ ಒಲೆಗೆ ಹಾಕಿ ಇನ್ನು
ಹೊತ್ತಿಕೊಂಡಿಹ ಮಮತೆಯನ್ನು ಎತ್ತಿ ಹೆಸರ ಹಿಂಗಿಸುತಲಿ ||೨||

ಜನನ ಸೊಂಡಿಗೆ ಹುರಿಯಬೇಕಣ್ಣ , ನಿಜವಾಗಿ ನಿಂತು
ತನುವ ತುಪ್ಪವ ಕಾಸಬೇಕಣ್ಣ
ಕನಕಗಿರಿ ನೆಲೆಯಾದಿ ಕೇಶವದಾಸ , ಕನಕನ ಕಟ್ಟಳೆಯೊಳು
ನಿಂತು ಸುಖದ ಪಾಕವನು ಚೆಂದದಿಂ ಸವಿದುಣ್ಣಲಿಕ್ಕೆ ||೩||
***

ಅಡಿಗೆಯನು ಮಾಡಬೇಕಣ್ಣ - ನಾನೀಗ ಜ್ಞಾನದಡಿಗೆಯನು ಮಾಡಬೇಕಣ್ಣ ಪ

ಅಡಿಗೆಯನ್ನು ಮಾಡಬೇಕುಮಡಿಸಬೇಕು ಮದಗಳನ್ನುಒಡೆಯನಾಜ್ಞೆಯಿಂದ ಒಳ್ಳೆಸಡಗರದಲಿ ಮನೆಯ ಸಾರಿಸಿ ಅ

ತನ್ನ ಗುರುವ ನೆನೆಯ ಬೇಕಣ್ಣತನುಭಾವವೆಂಬ ಭಿನ್ನ ಕಲ್ಮಶವಳಿಯ ಬೇಕಣ್ಣಒನಕೆಯಿಂದ ಕುಟ್ಟಿಕೇರಿ ತನಗೆ ತಾನೆ ಆದ ಕೆಚ್ಚನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ 1

ತತ್ವಭಾಂಡವ ತೊಳೆಯ ಬೇಕಣ್ಣ - ಸತ್ಯಾತ್ಮನಾಗಿಅರ್ತಿ ಅಕ್ಕಿಯ ಮಥಿಸಬೇಕಣ್ಣಕತ್ತರಿ ಮನವೆಂಬ ಹೊಟ್ಟನು ಎತ್ತಿ ಒಲೆಗೆ ಹಾಕಿ ಇನ್ನುಮುತ್ತಿಕೊಂಡಿಹ ಮಮತೆಯನ್ನು ಎತ್ತಿ ಎಸರ ಹಿಂಗಿಸುತಲಿ 2

ಜನನ ಸೊಂಡಿಗೆ ಹುರಿಯಬೇಕಣ್ಣ - ನಿಜವಾಗಿ ನಿಂತುತನುವು ತುಪ್ಪವ ಕಾಸಬೇಕಣ್ಣಕನಕಗಿರಿ ಕಾಗಿನೆಲೆಯಾದಿಕೇಶವನ ದಾಸಕನಕನ ಕಟ್ಟಳೆಯೊಳು ನಿಂತು ಸುಖದ ಪಾಕವ ಚಂದದಿ ಸವಿದುಣ್ಣಲಿಕ್ಕೆ 3

***