ಅನುದಿನವು ಶ್ರವಣಮನನಾದಿ ಸಾಧನ ಮಾಡು
ಇನ್ನು ಸಂಶಯವ್ಯಾತಕೊ ಪ.
ಏನು ಶಪಥವ ಮಾಡಲಿ ಮತವು ಹಿರಿದೆಂದು
ಜ್ಞಾನಿಗಳ ಸಮ್ಮತವೊ ಅ.ಪ.
ಗುರುಮಧ್ವಶಾಸ್ತ್ರವೆ ಸಕಲ ಶಾಸ್ತ್ರಧಿಕೆಂದು
ಶಿರವರಿದು ಮುಂದಿರಿಸಲೆ
ಪರಮತಜಾಲವೆಲ್ಲ ವೇದವಿರುದ್ಧವೆಂದು
ಶರಧಿಯನು ನಾ ದಾಟಲೆ1
ಭಾಗವತಶಾಸ್ತ್ರವೆ ಬಹು ಭಾಗ್ಯವೆಂತೆಂದು
ನೆಗಹಿ ಪರ್ವತವ [ನಿಲಿಸಲೆ]
ಭಾಗವತ ನಿಂದಕಗೆ ಬಹು ನರಕವೆಂತೆಂದು ಪರ್ವ-
ತಾಗ್ರದಿಂ ಧುಮುಕಲೆ 2
ವಿದಿತ ದೈವರೊಳಗೆ ವಿಷ್ಣು ಉತ್ತಮನೆಂದು
ವೇದಂಗಳ ಒಡನುಡಿಸಲೆ
ಅಧಿಕಾರಿಗಳೊಳಗೆ ಅಂಬುಜಸಂಭವನೆಂದು
[ಕಾದೆಣ್ಣೆ]ಯೊಳು ಮುಣುಗ [ಲೆ] 3
ಪರಲೋಕಸಾಧನಕೆ ತಾರತಮ್ಯಮತವೆಂದು
ಗರಳವನು ಕುಡಿಯಲೆ
ಹರಿದಿನಕೆ ಮರುದಿನಕೆ ಸರಿಯಿಲ್ಲವೆಂತೆಂದು
ಹರಿವ ಹಾವನು ಹಿಡಿಯಲೆ 4
ಗುರುಮಧ್ವರಾಯರೆ ಆತ್ಮರಕ್ಷಕರೆಂದು
ಅನಲವ ಕೈ ಪಿಡಿಯಲೆ
ಸಿರಿಹಯವದನನೆ ಅಮಿತ ಗುಣಪೂರ್ಣನೆಂದು ಅ-
ಶರೀರವನು ನುಡಿಸಲೆ 5
***
pallavi
anudinavu shravaNa mananAdi sAdhana mADu innu samshayavyAtako
anupallavi
Enu shapathava mADali I matavu piridendu jnAnigaLa sammatavo manuja
caraNam 1
gurumadhva shAstrave sakala shAstrakadhikendu shiravaridu mundirisale
paramata jAlavella vEdaviruddhavendu sharadhiyanu nA dATale
caraNam 2
bhAgavata shAstrave bahu bhAgyaventendu negahi parvatava nilisale
bhAgavata nindakage bahu narakaventendu parvatAgradim dhumukale
caraNam 3
viditadaivaroLage viSNu uttamanendu vEdangaLa oDanuDisale
adhikArigaLoLage ambujasambhavanendu kAdeNNeyoLu muNugale
caraNam 4
paralOkasAdhanake tAratamyamatavendu garaLavanu kuDiyale
haridinake marudinake sariyillaventendu hariva hAvanu hiDiyale
caraNam 5
gurumadhvarAyare AtmarakSakarendu analava kai piDiyale
siri hayavadanane amita guNapUrNanendu asharIravanu nuDisale
***