Showing posts with label ಶ್ರೀರಾಘವೇಂದ್ರ ಪಾಲಿಸೊ ಘೋರ ಪಾಪಾವಳಿ gurugovinda vittala C. Show all posts
Showing posts with label ಶ್ರೀರಾಘವೇಂದ್ರ ಪಾಲಿಸೊ ಘೋರ ಪಾಪಾವಳಿ gurugovinda vittala C. Show all posts

Monday, 6 September 2021

ಶ್ರೀರಾಘವೇಂದ್ರ ಪಾಲಿಸೊ ಘೋರ ಪಾಪಾವಳಿ ankita gurugovinda vittala C

 kruti by ಗುರುಗೋವಿಂದವಿಠಲ (ಚೀಕಲಪರವಿ)


ರಾಗ: [ಆಂಧೋಳಿಕಾ] ತಾಳ: ಆದಿ


ಶ್ರೀ ರಾಘವೇಂದ್ರ ಪಾಲಿಸೊ

ಘೋರ ಪಾಪಾವಳಿ ದೂರ ಮಾಡೆನ್ನ ರಕ್ಷಿಸೋ


ಮಾರಾರಿವಿನುತ ನಾರಾಯಣನ ಪಾ-

ದಾರಾಧಿಪ ಸುವಿಚಾರಿಗಳೊಳಗ್ರಣಿಯೆ

ಎನ್ನ ಧಣಿಯೆ ನಿನಗೆಣೆಯೆ ಇಲ್ಲವೋ ಕರುಣಿಯೇ ಅ.ಪ


ಕರುಣಾನಿಧೆ ಮಾಂ ಪಾಹಿ ಶರಣಾಗತಪಾಲಾ

ಗುರುಕೃಪಾ ಅಸ್ಮಾಕಂದೇಹಿ

ಸಿರಿಸರಸಿಜಭವ ಪುರಹರಮುಖನುತ

ಕರಿರಾಜವರದ ಹರಿಪಾದಪದುಮಭೃಂಗಾ

ಶುಭಾಂಗ ದಯಾಪಾಂಗ ಹತದುರ್ಜನ ಸಂಗಾ

ಪರಮಗುರು ಪರಿಪಾಲಕಾ ಗುರುಸುಖನಿಧಿ ಪ್ರೀಯಾ 

ಸರಸಿಜಾಂಬಕನಾರಾಧಕ ಪರಿಪರಿವಿಧದಲಿ

ಮೊರೆಪೊಂದಿದ ಈ ಶರಣನ ಮರೆಯದೆ ಪರಿಹರಿಸೋ

ಎನ್ನ ತಾಪಾ ಜಿತಕೋಪಾ ನಿಷ್ಪಾಪ ಮೋಹಕ ನರರೂಪಾ 2

ನಿಲಿಸೋ ಮನಸು ನಿಶ್ಚಲಾ ಗುರುಗೋವಿಂದವಿಠಲಾ-

ನಲ್ಲಿ ಭಕುತಿಯನಿತ್ತು ಕಲಿಮಲಾತೊಳೆದು ನಿನ್ನಯಪಾದ

ಸಲಿಲಜತೋರಿ ಕಲುಷ ಜನರೊಳಗೆ ಕಲಿಸದೆ ಪೊರೆ

ಘನಮಹಿಮಾ ಶುಭಕಾಯ ನಿಸ್ಸೀಮ ಹೃದ್ಗತ ಶ್ರೀರಾಮಾ 3

***