Showing posts with label ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ramesha. Show all posts
Showing posts with label ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ramesha. Show all posts

Wednesday, 4 August 2021

ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ankita ramesha

.. 

ಕಂಡೆವೆ ಕೌತುಕಕಪಟದ ಬಾಲೆಯ ಕಂಡೆವೆ ಕೌತುಕವ ಪರಹೆಂಡಿರು ಸಹಿತಾಗಿಗಂಡನ ಬೆರೆಯೋದು ಪ.

ಪಟ್ಟದರಸಿಗೆ ಸಿಟ್ಟು ತುಂಬಿಸಿ ಭಾಳ ಕುಟ್ಟಿ ಮೈದುನರ ಸವರಿಸಿಕುಟ್ಟಿ ಮೈದುನರ ಸವರಿಸಿ ದ್ರೌಪತಿಇಂಥವಳು ಹುಟ್ಟಬೇಕಿನ್ನು ಜಗದೊಳು 1

ಗಂಡನ ಬಳಗವ ಚಂಡನಾಡಿಸಿ ಬಿಟ್ಟೆಪುಂಡಗಾರ್ತಿಯೆ ಜಗದೊಳುಪುಂಡಗಾರ್ತಿಯೆ ಜಗದೊಳು ನಿನಕೀರ್ತಿ ಕೊಂಡಾಡುತಾರೆ ದ್ರೌಪದಿ2

ನೂರು ಮಂದಿಯ ಕೊಂದು ಊರು ಕೇರಿಯಪಡೆದುಯಾರ್ಯಾರನ್ನೆಲ್ಲ ಅಡವಿಗೆ ದ್ರೌಪದಿಯಾರ್ಯಾರನ್ನೆಲ್ಲ ಅಡವಿಗೆ ಅಟ್ಟಿದೆಮಹಾರಾಯಳೆ ನಿನಗೆ ಭಯ ಉಂಟೆ3

ಜಾಣಿಯೆಂಬೊ ನುಡಿಯಿಂದ ವಾಣಿ ಜನಿಸಿಸುಶ್ರೇಣಿ ತಾತನ್ನು ದ್ರೌಪತಿಸುಶ್ರೇಣಿ ತಾತನ್ನು ಮದುವ್ಯಾದಿ ಇದಕಿನ್ನುಜಾಣಿಯರು ನಗರೆ ಜಗದೊಳು4

ಎಂತೆಂಥ ಪತಿಗಳ ಎಂತೆಂತು ಮಾಡಿದೆಕೊಂಚರೆ ಭೀತಿ ನಿನಗಿಲ್ಲಕೊಂಚರೆ ಭೀತಿ ನಿನಗಿಲ್ಲ ಧರ್ಮನ ಶಾಂತ ಗುಣದಿಂದ ಉಳಿದಿದಿ ದ್ರೌಪತಿ5

ಒಂದೊಂದು ನಿನ್ನ ಗುಣವು ಚಂದಾಗಿ ವರ್ಣಿಸಲುಎಂದಿಗೆ ವಶವ ಎಲೆನಾರಿಎಂದಿಗೆ ವಶವ ಎಲೆನಾರಿ ಐವರಿಗೆ ಕುಂದು ಬಂದೀತು ಬಿಡುಕಂಡೆ ದ್ರೌಪತಿ 6

ಇಷ್ಟಮಿತ್ರರೊಳು ಉಟ್ಟ ಸೀರೆಯಸೆಳೆದುಒಟ್ಟಿದನಾಗ ಸಭೆಯೊಳು ಒಟ್ಟಿದನಾಗ ಸಭೆಯೊಳು ರಮಿಯರಸು ಧಿಟ್ಟಿ ನಿನಮಾನ ಉಳಿಸಿದ ದ್ರೌಪತಿ7

****