..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ವಿಶ್ವ ಪರಮಾತ್ಮ ಸ್ತೋತ್ರ
ಈಶ ವಿಶ್ವ ರಮೇಶ | ಪಾಲಿಸೆನ್ನನು ದಕ್ಷಿಣಾಕ್ಷಿನಿವಾಸ |
ರೂಪಾಂತರದಿ ನೀ | ವಾಮನಯನದಿ ಕಾಶ | ಶರಣು ಶರಣು |
ಸರ್ವೇಶ | ಜಾಗೃತ ಕಾಲದಿ ಸರ್ವ ವ್ಯಾಪಾರಗಳ ಮಾಡಿಸುವಂಥ
ವಿಭುವೆ| ಮಂಗಳಾತ್ಮ ನಿಸ್ಸಂಗ ಚಿನ್ಮಯ ಸರ್ವಸುಖ
ಸೌಭಾಗ್ಯ ದಾತನೇ ಪ
ಕಂಜನೇತ್ರ ಶ್ರೀರಾಮ | ಸರ್ವದಲ್ಲಿ ಸಮ ಸಾಮ ಜ್ಞಾ£ಶೃಂಗ ನಾಮ
ಯಾಜ್ಯ ಸ್ವರೂಪದಿಂದ ನೀ ಯರ್ಜು ನಾಮ | ಉತ್ಥಾಪಕೊತ್ತ ನಾಮ
ಸರ್ವಪಾಪೋಜ್ಜಿತ ಉನ್ನಾಮನೇ ದೀಪ್ತ ಇಂಧನ ವಾಮ ಮಂಗಳ |
ಸರ್ವ ವೇದಗಳಿಂದ ಸರ್ವದಾ ವಾಣಿ ಪ್ರಾಣ ಸಂಸ್ತುತ್ಯ ಶ್ರೀಶನೇ
ದಿವ್ಯದೃಷ್ಟಿ ಗೋಚರ ವಿರಾಜನೇ ಶ್ರೀ ರಮಾ ಸಮೇತನಾಗಿಹ
ಸರ್ವದಾ ಸುಖ ಪೂರ್ಣ ಆತ್ಮನೇ |
ಮೃತ್ಯು ವರ್ಜಿತ ಅಮೃತ ಜಯ ಜಯ 1
ಭಯ ವಿವರ್ಜಿತ ಅಭಯ | ಗುಣಪೂರ್ಣ ಬ್ರಹ್ಮ ಪುರುಷ
ಪೂರ್ಣೈಶರ್ಯ | ಶಂಖ ಚಕ್ರ ಗದಾಬ್ಜ ಸಂಯುತ ದಿವ್ಯ |
ಶಬಲ ವರ್ಣ ಸುವರ್ಣ ವಸ್ತು ನಿಸ್ಸಂಗ ನಿನ್ನ ಸ್ಥಾನವಾದುದರಿಂದಲೇವೇ
ಸರ್ವ ಉದಕಾದ್ಯ ಅಖಿಳವಸ್ತು ಅಸಂಗವಾಗಿವೆ ಎನ್ನ ಕಂಣ್ಗಳು |
ಸರ್ವದಾ ಸೌಂದರ್ಯ ರೂಪ ಶ್ರೀವಾಮನನೆ ಎನ್ನ ಎಡದ ಕಣ್ಣಲಿ
ಸರ್ವ ನಿಜ ಸದ್ಭÀ್ಭಕ್ತಭಾಮನ ದಕ್ಷಿಣಾಕ್ಷಿಗತ ನಿಯಾಮಕ | 2
ವಿಶ್ವ ಶರಣು ಶುಭಾಂಗ | ಎರಡು ಪಾದವು ನಾಲ್ಕು ಹಸ್ತವು ಏಕ |
ಕುಂಡಾದಂಡ ಹೀಗೆ ಜ್ಞಾನ ಸುಖ ಸಪ್ತಾಂಗ ಪಾಹಿಮಾಂ ಮಂಗಳಾಂಗ
ಹತ್ತು ಮೇಲೊಂಬತ್ತು ಮುಖಗಳು ಮಧ್ಯ ಗಜಮುಖ ಮಂಗಳಪ್ರದ |
ಮೋದಮಯ ನರಮುಖ ಒಂಬತ್ತು ಬಲದ ಪಾಶ್ರ್ವದಿ ಹಾಗೂ ಎಡದಿ |
ಖೇದರಹಿತ ಜ್ಞಾನಮಯ ಒಂಬತ್ತು ನರಮುಖ ವಿಶ್ವ ಚಕ್ಷುಸ |
ಪದ್ಮಜನ ಪಿತ ಶ್ರೀ ಪ್ರಸನ್ನ ಶ್ರೀನಿವಾಸ ವಿಶ್ವನೇ ಶರಣು ಸಂತತ | 3
***