ಪುರಂದರದಾಸರು
ರಾಗ ಭೈರವಿ ತ್ರಿಪುಟತಾಳ
ಕೆಟ್ಟೆನಲ್ಲೊ ಹರಿಯೆ , ಸಿಟ್ಟು ಮಾಡಿ
ಎನ್ನಬಿಟ್ಟು ಕಳೆಯಬೇಡ ||ಪ||
ಬಂದೆನು ನಾನು ತಂದೆತಾಯಿಗಳುದರದಿ
ಒಂದು ಅರಿಯದೆ ಬಾಲಕತನದೊಳು
ಮುಂದುವರಿದ ಯೌವನದೊಳು ಸತಿಸುತ -
ರಂದವ ನೋಡುತ್ತ ನಿನ್ನ ನಾಮವ ಮರೆತೆನು ||
ಸ್ನಾನಸಂಧ್ಯಾವಂದನೆ ಹೀನವಾಯಿತು ಬಹು-
ಮಾನವಿಲ್ಲ್ಲದೆ ಕುಲಹೀನರಾಶ್ರಯದಿಂದ
ಜ್ಞಾನಿಗಳೊಡನಾಟವಿಲ್ಲದೆ ಮನದೊಳು
ದಾನಧರ್ಮದ ಬಟ್ಟೆಯೆಂತೆಂದು ಮರೆತೆನು ||
ಮೊದಲೆ ಬುದ್ಧಿವಿಹೀನನದರೊಳು ವೃದ್ಧಾಪ್ಯ
ಕದನವು ದಶದಿಕ್ಕಿನುದಯದ ರಾಯರ
ಎದೆನೀರು ಬತ್ತಿತು ಅದರಿಂದ ನಿನ್ನಯ
ಪದಪದ್ಮಯುಗಳ ತುದಿಯ ನಾ ಮರೆತೆನು ||
ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು
ಕಾಡೊಳಗಾಡುವ ಮೃಗದಂತೆ ಜೀವಿಸಿ
ಗೂಡೊಳಗಿರುವ ಗೂಬೆಯ ತೆರದಂತೆ
ಮಾಡದೆ ನಿನ್ನಯ ಸ್ಮರಣೆಯ ಮರೆತೆನು ||
ಬುದ್ಧಿಹೀನನು ನಾ ಉದ್ಧರಿಸೆಲೋ ದೇವ
ಮುದ್ದು ಶ್ರೀ ಪುರಂದರವಿಠಲನೆನ್ನ
ಬುದ್ಧಿಯೊಳಡಗಿಯೆ ತಿದ್ದಿಟ್ಟು ನಡೆಸಲು
ಪೊದ್ದುವೆ ನಿನ್ನಯ ಚರಣಾರವಿಂದವ ||
***
ರಾಗ ಭೈರವಿ ತ್ರಿಪುಟತಾಳ
ಕೆಟ್ಟೆನಲ್ಲೊ ಹರಿಯೆ , ಸಿಟ್ಟು ಮಾಡಿ
ಎನ್ನಬಿಟ್ಟು ಕಳೆಯಬೇಡ ||ಪ||
ಬಂದೆನು ನಾನು ತಂದೆತಾಯಿಗಳುದರದಿ
ಒಂದು ಅರಿಯದೆ ಬಾಲಕತನದೊಳು
ಮುಂದುವರಿದ ಯೌವನದೊಳು ಸತಿಸುತ -
ರಂದವ ನೋಡುತ್ತ ನಿನ್ನ ನಾಮವ ಮರೆತೆನು ||
ಸ್ನಾನಸಂಧ್ಯಾವಂದನೆ ಹೀನವಾಯಿತು ಬಹು-
ಮಾನವಿಲ್ಲ್ಲದೆ ಕುಲಹೀನರಾಶ್ರಯದಿಂದ
ಜ್ಞಾನಿಗಳೊಡನಾಟವಿಲ್ಲದೆ ಮನದೊಳು
ದಾನಧರ್ಮದ ಬಟ್ಟೆಯೆಂತೆಂದು ಮರೆತೆನು ||
ಮೊದಲೆ ಬುದ್ಧಿವಿಹೀನನದರೊಳು ವೃದ್ಧಾಪ್ಯ
ಕದನವು ದಶದಿಕ್ಕಿನುದಯದ ರಾಯರ
ಎದೆನೀರು ಬತ್ತಿತು ಅದರಿಂದ ನಿನ್ನಯ
ಪದಪದ್ಮಯುಗಳ ತುದಿಯ ನಾ ಮರೆತೆನು ||
ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು
ಕಾಡೊಳಗಾಡುವ ಮೃಗದಂತೆ ಜೀವಿಸಿ
ಗೂಡೊಳಗಿರುವ ಗೂಬೆಯ ತೆರದಂತೆ
ಮಾಡದೆ ನಿನ್ನಯ ಸ್ಮರಣೆಯ ಮರೆತೆನು ||
ಬುದ್ಧಿಹೀನನು ನಾ ಉದ್ಧರಿಸೆಲೋ ದೇವ
ಮುದ್ದು ಶ್ರೀ ಪುರಂದರವಿಠಲನೆನ್ನ
ಬುದ್ಧಿಯೊಳಡಗಿಯೆ ತಿದ್ದಿಟ್ಟು ನಡೆಸಲು
ಪೊದ್ದುವೆ ನಿನ್ನಯ ಚರಣಾರವಿಂದವ ||
***
pallavi
keTTenallo hariye siTTumADi enna biTTu kaLeya bEDa
caraNam 1
bandenu nA tande tAyigaLudaradi ondu ariyade bAlakatanadoLu
munduvarida yauvanadoLu sati suta randava nODutta ninna nAmava maretenu
caraNam 2
snAna sandhyAvandane hInavAyitu bahu mAnavillade kula hInarAshrayadinda
jnAnigaLoDanATavillade manadoLu dAna dharmada baTTeyentendu maretenu
caraNam 3
modale buddhi vihInanadaroLalu vrddhApya kadanavu dasha dikkidunayada rAyara
edenIru battidu Adarinda ninnaya pada padma yugaLa tudiya nA maretenu
caraNam 4
mUDhanAdenu ninna bEDi koLLade nAnu kADoLa kATuva mrgadante jIvisi
kUDoLagirutiha kUbeya teranante mADade ninnaya smaraNeya maretenu
caraNam 5
buddhi hInanu nAnu uddhariselo dEva muddu shrI purandara viTTala enna
buddhiyoLaDagiye tiddiTTu naDesalu podduve ninnaya caraNAravindava
***
ಕೆಟ್ಟೆನಲ್ಲೊ ಹರಿಯೆ ಸಿಟ್ಟು ಮಾಡಿ ಎನ್ನ ಬಿಟ್ಟು ಕಳೆಯ ಬೇಡ ಪ
ಬಂದೆನು ನಾ-ತಂದೆ-ತಾಯಿಗಳುದರದಿ |ಒಂದನೂ ಅರಿಯದೆ ಬಾಲಕತನದೊಳು ||ಮುಂದುವರಿದ ಯೌವನದೊಳು ಸತಿ-ಸುತ-|ರಂದವ ನೋಡುತ ನಿನ್ನ ನಾ ಮರೆತೆನೊ 1
ಸ್ನಾನ-ಸಂಧ್ಯಾನವು ಹೀನವಾಯಿತು ಬಹು-|ಮಾನವಿಲ್ಲದೆ ಕುಲಹೀನರಾಶ್ರಯದಿಂದ ||ಙ್ಞÕನಿಗಳೊಡನಾಟವಿಲ್ಲದೆ ಮನದೊಳು |ದಾನ-ಧರ್ಮದ ಬಟ್ಟೆಯಂತೆಂದು ಮರೆತನು 2
ಮೊದಲೆ ಬುದ್ದಿಯು ಹೀನ ಅದರೊಳು ವೃದ್ಧಾಪ್ಯ |ಕದನವು ದಶದಿಕ್ಕಿನುದಯದ ರಾಯರ ||ಎದೆನೀರು ಬತ್ತಿತು ಅದರಿಂದ ನಿನ್ನಯ |ಪದಪದ್ಮಯುಗಳದ ತುದಿಯ ನಾ ಮರೆತೆನು 3
ಮೂಢನಾದೆನು ನಿನ್ನ ಬೇಡಿಕೊಳ್ಳದೆ ನಾನು |ಕಾಡೊಳಗಾಡುವ ಮೃಗದಂತೆ ಜೀವಿಸಿ ||ಗೂಡೊಳಗಿರುತಿಹ ಗೂಬೆಯ ತೆರನಂತೆ |ಮಾಡದೆ ನಿನ್ನಯ ಸ್ಮರಣೆಯ ಮರೆತೆನು 4
ಬುದ್ದಿಹೀನನು ನಾನು ಉದ್ದರಿಸೆಲೊ ದೇವಮುದ್ದು ಶ್ರೀಪುರಂದರವಿಠಲನೆನ್ನ ||ಬುದ್ದಿಯೊಳಡಗಿಯೆ ತಿದ್ದಿಟ್ಟು ನಡೆಸಯ್ಯ |ಪೊದ್ದುವೆ ನಿನ್ನಯ ಚರಣಾರವಿಂದವ 5
*******