Showing posts with label ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ lakumeesha jitamitra stutih. Show all posts
Showing posts with label ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ lakumeesha jitamitra stutih. Show all posts

Saturday 1 May 2021

ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ ankita lakumeesha jitamitra stutih

 jitamitra rayara mutt yati stutih

ರಾಗ : ಹಂಸಾನಂದಿ  ತಾಳ : ಆದಿ 

ಈ ಜಗದಲಿ ದಿವ್ಯ ತೇಜೋ ಮಹಿಮೆ ಬೀರಿದ ।

ಶ್ರೀ ಜಿತಾಮಿತ್ರರ ನಮಿಪೆ ।। ಪಲ್ಲವಿ ।।


ಮೂಜಗಾಧಿಪ ರೂಪಿ ಜಲಜಕ್ಕೆ ।

ಸೋಜಿಗದಿಂದ ತಾವು ಉಣಿಸುತ ।

ಶ್ರೀ ಜಗದ್ಗುರು ಮಧ್ವರಾಯರ ।

ನೈಜ ಕೃಪೆಯನು ಪಡೆದು ಮೆರೆದ ।। ಅ ಪ ।।


ಹತ್ತಾವತಾರನ ಉತ್ತಮ ಒಲಿಮೆಯಲಿ ।

ಕೃತ್ತಿವಾಸಾಂಶ ಕ್ಷಿತಿಯಲಿ ।

ಯೆತ್ತಿ ಜನ್ಮ ಜಿತ್ತಪ್ಪ ನಾಮದಿ ।।

ಎತ್ತುಗಳ ಹೂಡಿ ಕೃಷಿಯ ಮಾಡುತ ।

ನಿತ್ಯ ಜನಿವಾರ ಧರಿಸಿ ಊಟದಿ ।

ಮತ್ತೆ ತೆಗೆಯುತ ಧರಿಪ ವೃತ್ತಿಯುಳ್ಳ ।। ಚರಣ ।।


ಶ್ರೀ ವಿಬುಧೇಂದ್ರರು ಈ ಊರಿಗೆ ಬರಲು ।

ನೋವಿನೀತನ ಭಗಿನಿಯು ।

ಭಾವ ಶುದ್ಧೀಲಿ ಯತಿಯ ಮೊರೆಯಿಡೆ ।।

ಠಾವಿಲೀತನ ಕರೆದು ಶಾಸಿಸೆ ।

ಶ್ರೀ ವರ ನರಹರಿಯ ಸಾಲಿಗ್ರಾಮ ।

ತಾವು ಕೊಟ್ಟು ಉಣಿಸೆನ್ನ ಉಣಿಸಿದೆ ।। ಚರಣ ।।


ಸುತ್ತಿ ದೇಶವ ಗುರುಗಳು ಮತ್ತೀ ಊರಿಗೆ ಬರುತ ।

ಜಿತ್ತಪ್ಪನ ಪರಿಕೀಸುತ ।

ಇತ್ತು ಆಶ್ರಮ ಜಿತಾಮಿತ್ರರೆಂದು ।।

ಮೂರ್ತಿ ಶ್ರೀ ಲಕುಮೀಶನ ಕೊಡೆ ।

ಭಕ್ತಿಯಿಂದಲಿ ಒಲಿಸಿ ಗೋನದ ।

ಉತ್ತಮ ತರು ಕೃಷ್ಣೆಯಲಿ ನಿಂತೆ ।। ಚರಣ ।।

****