Showing posts with label ದಾಸೋಹಂ ತವ ದಾಸೋಹಂ ದೋಷರಹಿತ hanumesha vittala. Show all posts
Showing posts with label ದಾಸೋಹಂ ತವ ದಾಸೋಹಂ ದೋಷರಹಿತ hanumesha vittala. Show all posts

Tuesday, 1 June 2021

ದಾಸೋಹಂ ತವ ದಾಸೋಹಂ ದೋಷರಹಿತ ankita hanumesha vittala

 ದಾಸೋಹಂ ತವ ದಾಸೋಹಂ ದೋಷರಹಿತ

ಮಧ್ವೇಶ ವಿಠಲ ಪ


ಮಂಗಳಾಂಗ ಮಾತಂಗ ವರದ ಭುಜಂಗ ಶಯನ

ತವ ದಾಸೋಹಂ

ಗಂಗಾಪಿತ ಉತ್ತುಂಗ ಮಹಿಮ ನರಸಿಂಗ ಶುಭಾಂಗ

ಕೃಪಾಂಗರಂಗ ತವ ದಾಸೋಹಂ 1


ತ್ರಿಗುಣಾತೀತನೆ ಅಗಣಿತ ಮಹಿಮನೆ ಜಗದೀಶನೆ

ತವದಾಸೋಹಂ

ಜಗದಂತರ್ಗತ ಜಗದೋದ್ಧಾರಕ ಜಗನ್ನಿಯಾಮಕ

ಜಗತ್ಪಾಲ ತವದಾಸೋಹಂ 2


ಸಿಂಧುಶಯನ ಸೌಂದರ್ಯರೂಪ ಆನಂದ ಪೂರ್ಣ

ತವ ದಾಸೋಹಂ

ಇಂದಿರೇಶ ಸಿರಿ ಮಂದಿರ ಹರಿ ಗೋವಿಂದ ಉಪೇಂದ್ರ

ಮುಕುಂದಮೂರ್ತಿ ತವ ದಾಸೋಹಂ 3


ಅನ್ನಮಯನೆ ಆನಂದಮಯನೇ ವಿಜ್ಞಾನಮಯನೇ ತವದಾಸೋಹಂ

ಮನೋಮಯನೇ ಮನ್ಮಥ ಜನಕನೆ ಪ್ರಾಣಮಯನೆ ಶ್ರೀ -

ವಾಜ್ಞಯನೇ ತವ ದಾಸೋಹಂ4


ಶ್ರೀಶನೇ ಸರ್ವಮಹೀಶನೇ ವರ ಹನುಮೇಶವಿಠಲ ತವದಾಸೋಹಂ

ನಾಶರಹಿತ ರಮೇಶನೇ ಸುರಮುನಿ ಪೋಷಕನೇ

ಲಕುಮಿ ಉಲ್ಲಾಸನೇ ತವ ದಾಸೋಹಂ 5

****