Showing posts with label ಇನ್ನಾದರೂ ಹರಿಯ ನೆನೆಯೊ ನೀ ಮನುಜಾ purandara vittala. Show all posts
Showing posts with label ಇನ್ನಾದರೂ ಹರಿಯ ನೆನೆಯೊ ನೀ ಮನುಜಾ purandara vittala. Show all posts

Tuesday 3 December 2019

ಇನ್ನಾದರೂ ಹರಿಯ ನೆನೆಯೊ ನೀ ಮನುಜಾ purandara vittala

ರಾಗ ಮುಖಾರಿ ಝಂಪೆ ತಾಳ

ಇನ್ನಾದರೂ ಹರಿಯ ನೆನೆ ಕಂಡ್ಯ ಮನುಜ
ಮುನ್ನಾದ ದುಃಖವು ನಿಜವಾಗಿ ತೊಲಗುವುದು ||

ಊರೂರ ನದಿಗಳಲಿ ಬಾರಿಬಾರಿಗೆ ಮುಳುಗಿ
ತೀರದಲಿ ಕುಳಿತು ನೀ ಹಣೆಗೆ ನಿತ್ಯ
ನೀರಿನಲಿ ಮಟ್ಟಿಯನು ಕಲೆಸಿ ಬರೆಯುತ ಮೂಗ
ಬೇರನ್ನು ಪಿಡಿದು ಮುಳುಗಿಕ್ಕಲೇನುಂಟು ||

ನೂರಾರು ಕರ್ಮಂಗಳನ್ನು ಡಂಬಕೆ ಮಾಡಿ
ಆರಾರಿಗೋ ಹಲವು ದಾನ ಕೊಟ್ಟು
ದಾರಿದ್ರ್ಯವನು ಪಡೆದು ತಿರಿದುಂಬುವುದಕೀಗ
ದಾರಿಯಾಯ್ತೇ ಹೊರತು ಬೇರೆ ಫಲವುಂಟೇ ||

ನಾಡಾಡಿ ದೈವಗಳ ಚಿನ್ನ ಬೆಳ್ಳಿಗಳಿಂದ
ಮಾಡಿಕೊಂಡದರ ಪೂಜೆಯನು ಮಾಡಿ
ಕಾಡಕಳ್ಳರು ಬಂದು ಅವನು ಕೊಂಡೊಯ್ಯೆ
ಮಾಡಿಕೊಂಡಿರ್ದುದಕೆ ಬಾಯ ಬಡಕೊಳ್ಳುವೆಯೊ ||

ಮಗನ ಮದುವೆಯು ಎಂದು ಸಾಲವನು ಮಾಡಿ ನೀ
ಸುಗುಣಿಯೆನ್ನಿಸ್ಕೊಳ್ಳಲು ವ್ಯಯಮಾಡಿದೆ
ಹಗರಣವಪಡಿಸಿದರೆ ಸಾಲಗಾರು ಬಂದು
ಬಗೆಬಗೆಯೊಳವರ ಕಾಲ್ಗೆ ಬಿದ್ದಿರುವೆ ||

ಕೆಟ್ಟ ಈ ಬದುಕುಗಳ ಮಾಡಿದರೆ ಫಲವೇನು
ಥಟ್ಟನೇ ಶ್ರೀ ಹರಿಯ ಪದವ ನಂಬು
ದಿಟ್ಟ ಶ್ರೀಪುರಂದರವಿಠಲ ಗತಿಯೆಂದರೆ
ಸುಟ್ಟು ಹೋಗುವುದಯ್ಯ ಕಷ್ಟರಾಶಿಗಳು |
***

pallavi

innAdaru hariya nene kaNDya manuja munnAda dukkhavu nijavAgi tolaguvudu

caraNam 1

UrUra nidhigaLali bAribArige muLugi tIradali kuLitu nI haNege nitya
nIrinali maTTiyanu kalesi bareyuta mUga bErannu piDidu musukikkalEnuNTu

caraNam 2

nUrAru karmangaLannu Dambhake mADi ArArigO halavu dAna koTTu
dAridryavanu paDedu tiridumbuvudakIga dAriyAitO horadu bEre balavuNTe

caraNam 3

nADADi daivagaLa cinna beLLigaLinda mADi koNDadara pUjeyanu mADi
kADa kaLLaru bandu avugaLanu koNDoyye mADikoNDirdudage bAya baDEkoLLuveyo

caraNam 4

magana maduveyu endu sAlvanu mADi nI suguNiyennisi koLLalu vayya mADide
hagaraNava paDisidare sAlakAranu bandu bage bageyoLavara kAlgeragi biddiruve

caraNam 5

keTTa I badukugaLa mADidare balavEnu taTTane shrIhariya pAdava nambu
diTTa shrI purandara viTTala gatiyendhare suTTu hOguvudayya kaSTa rAshigaLu
***

ಇನ್ನಾದರೂ 
ಹರಿಯ ನೆನೆಯೊ ನೀ ಮನುಜಾ 
ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು... ಪ

ಊರೂರ ನದಿಗಳಲಿ ಬಾರಿ ಬಾರಿಗೆ ಮುಳುಗಿ 
ತೀರದಲಿ ಕುಳಿತು ನೀ ಪಣೆಗೆ ನಿತ್ಯ 
ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು 
ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು..... 1

ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ 
ಆರಾರಿಗೋ ಹಣದ ದಾನಕೊಟ್ಟು 
ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ 
ದಾರಿಯಾಯಿತೆ ಹೊರತು ಬೇರೆ ಫಲವುಂಟೇ.....2

ಕಾಡುದೈವಗಳನ್ನು ಚಿನ್ನ - ಬೆಳ್ಳಿಗಳಿಂದೆ 
ಮಾಡಿಕೊಂಡವರ ಪೂಜೆಯನೆ ಮಾಡಿ 
ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ 
ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ.....3

ಮಗನ ಮದುವೆಯು ಎಂದು ಸಾಲವನು ಮಾಡಿ ನೀ 
ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ 
ಹಗರಣವ ಪಡಿಸಿದರೆ ಸಾಲಗಾರರು ಬಂದು 
ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ.....4

ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು
ತಟ್ಟನೇ ಶ್ರೀಹರಿಯ ಪದವ ನಂಬಿ 
ದಿಟ್ಟ ಪುರಂದರವಿಠಲನೆ ಎಂದರೆ 
ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು ....5
***