ರಾಗ ಕಾಪಿ/ಚಾಪು ತಾಳ
ನೀನಿರಲು ನಮಗೇತರ ಭಯವೋ
ಸನಕಾದಿ ಪ್ರಿಯ ತಿರುವೇಂಗಳಯ್ಯ || ಪಲ್ಲವಿ ||
ಚರಣದಿಂದುದಿಸಿದವಳ ಸುತನ ಮೊಮ್ಮಗನ ಸತಿ
ಭರದಿಂದ ನಿಮ್ಮ ಸ್ತೋತ್ರ ಮಾಡಲು
ಹರುಷದಿಂದ ಕೇಳಿ ನಲಿದೈವರ
ನಾರಿ ಲಜ್ಜೆಯ ಕಾಯಿದ ಕರುಣ ದಯಾಸಿಂಧು || ೧ ||
ಕ್ಷುಧೆಯಿಂದ ಬಂದ ಅಗಸ್ತ್ಯಮುನಿ ಶಾಪದಲಿ
ಮದುಯುತನಾಗಿ ತಾನು ಗಜನಾಗಿರೆ
ಅಘಟವಾಗಿದ್ದ ನೆಗಳಿಗೆ ಸಿಲ್ಕಿ ಧೇನಿಸಲು
ನಿಜ ಚಕ್ರದಲಿ ಕಾಯಿದ ಗಜರಾಜವರದ || ೨ ||
ನೀರ ಬೊಬ್ಬುಳಿಯಂತೆ ನಿತ್ಯವಲ್ಲವೊ ದೇಹ
ಘೋರ ಸಂಸಾರದೊಳು ತೊಳಲಬೇಡ
ಶ್ರೀರಮಣ ಪುರಂದರವಿಠಲ ಪರದೈವನೆಂದು
ಸಾರುತಿರಲು ಮನವೆ ಸುಮ್ಮನಿರಲು ಬೇಡ || ೩ ||
ನೀನಿರಲು ನಮಗೇತರ ಭಯವೋ
ಸನಕಾದಿ ಪ್ರಿಯ ತಿರುವೇಂಗಳಯ್ಯ || ಪಲ್ಲವಿ ||
ಚರಣದಿಂದುದಿಸಿದವಳ ಸುತನ ಮೊಮ್ಮಗನ ಸತಿ
ಭರದಿಂದ ನಿಮ್ಮ ಸ್ತೋತ್ರ ಮಾಡಲು
ಹರುಷದಿಂದ ಕೇಳಿ ನಲಿದೈವರ
ನಾರಿ ಲಜ್ಜೆಯ ಕಾಯಿದ ಕರುಣ ದಯಾಸಿಂಧು || ೧ ||
ಕ್ಷುಧೆಯಿಂದ ಬಂದ ಅಗಸ್ತ್ಯಮುನಿ ಶಾಪದಲಿ
ಮದುಯುತನಾಗಿ ತಾನು ಗಜನಾಗಿರೆ
ಅಘಟವಾಗಿದ್ದ ನೆಗಳಿಗೆ ಸಿಲ್ಕಿ ಧೇನಿಸಲು
ನಿಜ ಚಕ್ರದಲಿ ಕಾಯಿದ ಗಜರಾಜವರದ || ೨ ||
ನೀರ ಬೊಬ್ಬುಳಿಯಂತೆ ನಿತ್ಯವಲ್ಲವೊ ದೇಹ
ಘೋರ ಸಂಸಾರದೊಳು ತೊಳಲಬೇಡ
ಶ್ರೀರಮಣ ಪುರಂದರವಿಠಲ ಪರದೈವನೆಂದು
ಸಾರುತಿರಲು ಮನವೆ ಸುಮ್ಮನಿರಲು ಬೇಡ || ೩ ||
***
pallavi
nIniralu namagEtake bhayavO
anupallavi
sanakAdigaLa priya tiruvEngaLayya
caraNam 1
caraNadindudisidavaLa sutana mommana sati bharadinda nimma stOtrava
mADalu haruSadinda kELi nalidaivara nAri lajjeya kAyida karuNa dayAsindhu
caraNam 2
kSudheyinda banda agastyamuni shApadali madayutanAgi tAnu gajanAgire
akhaTavAgidda negaLige silki dhEnisalu nija cakradali kAyida gajarAja varada
caraNam 3
nIra bobbuLiyante nityavallavo dEha ghOra samsAradoLu toLala bEDa shrI
ramaNa purandara viTtala paradaivavendu sArutiralu manave summaniralu bEDa
***
ತಿರುವೇಂಗಳಯ್ಯ - ತಿರುವೇಂಗಡದ ಒಡೆಯ, ವೆಂಕಟಾಚಲಪತಿ.
ಚರಣದಿಂದುದಿಸಿದವಳ ಸುತನ... - ಗಂಗೆಯ ಮಗನಾದ ಭೀಷ್ಮನ ಮೊಮ್ಮಗನ ವಾವೆಯಲ್ಲಿದ್ದ ಯುಧಿಷ್ಠಿರನ ಹೆಂಡತಿಯಾದ ದ್ರೌಪದಿಯು.
ಭರದಿಂದ - ತುಂಬಿದ ಸಭೆಯಲ್ಲಿ ದು:ಶಾಸನನು ತನ್ನ ಸೀರೆ ಸೆಳೆಯುತ್ತಿರುವಾಗ.
ಐವರ ನಾರಿ - ಪಾಂಡವರೈವರ ಹೆಂಡತಿ ದ್ರೌಪದಿ.
ಕ್ಷುದೆಯಿಂದ... - ಗಜೇಂದ್ರಮೋಕ್ಷದ ಕಥೆ. ಪಾಂಡ್ಯದೇಶದ ದೊರೆ ಇಂದ್ರದ್ಯುಮ್ನನು ತನ್ನ ಮನೆಗೆ ಬಂದ ಅಗಸ್ತ್ಯರನ್ನು ಅಸಡ್ಡೆಯಿಂದ ಕಂಡನಾಗಿ ಅಗಸ್ತ್ಯನು ಅವನನ್ನು ಆನೆಯಾಗೆಂದು ಶಪಿಸಿ ಹೋದನು.
ಧೇನಿಸಲು - ಧ್ಯಾನಿಸಲು.
ನೆಗಳು - ಮೊಸಳೆ.
ನಿಜ ಚಕ್ರದಲಿ - ತನ್ನ ಚಕ್ರವನ್ನು ಮೊಸಳೆಯೆಡೆಗೆ ಹರಿಹಾಯಿಸಿ.
ನೀರ ಬೊಬ್ಬುಳಿ - ನೀರ ಮೇಲಣ ಗುಳ್ಳೆ.
[ ಪುರಂದರ ಸಾಹಿತ್ಯ ದರ್ಶನ - ಭಾಗ ೧]
~*~