Showing posts with label ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ prasannashreenivasa. Show all posts
Showing posts with label ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ prasannashreenivasa. Show all posts

Thursday, 5 August 2021

ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು

ವಿಷ್ಣು ತೀರ್ಥ ಅಣು ವಿಜಯ


ಅರಣ್ಯಕಾಚಾರ್ಯ ಶ್ರೀವಿಷ್ಣು ತೀರ್ಥಾರ್ಯರ

ಚರಣಸರಸೀರುಹದಿ ಶರಣಾದೆ ಸತತ

ಹೊರ ಒಳಗೆ ಪ್ರಜ್ವಲಿಪ ಅನಘಗುಣ ಪರಿಪೂರ್ಣ

ಸಿರಿವರ ಹರಿಕೃಪಾ ಪ್ರಸಾದವೊದಗಿಸುವ ಪ


ಟೀಕಾಚಾರ್ಯರ ಪಾದ ಸೇವಿಸಿದ ಫಲವಾಗಿ

ಭಾಗೀರಥಿ ಬಾಳಾಚಾರ್ಯರಲಿ ಜನಿಸಿ

ವೇಂಕಟರಾಮಾರ್ಯ ಐಜಿಯವರ ಸುಪವಿತ್ರ

ಮುಖ ಪಂಕಜದಿಂದ ಕಲಿತರು ಸಚ್ಛಾಸ್ತ್ರ 1

ಜಯತೀರ್ಥ ನಾಮದಲಿ ಮೊದಲೆರಡು ಆಶ್ರಮ

ನಿಯಮದಿ ಚರಿಸಿ ಈ ವೈರಾಗ್ಯ ನಿಧಿಯು

ಸತ್ಯಸಂಧರಸುತ ಸತ್ಯವರ ತೀರ್ಥರಿಂ

ತುರೀಯಾಶ್ರಮಕೊಂಡ ವಿಷ್ಣು ತೀರ್ಥಾರ್ಯ 2

ಏನು ಧನ್ಯರೋ ಸತ್ಯಧರ್ಮತೀರ್ಥರು ಮತ್ತು

ವಿಷ್ಣು ತೀರ್ಥರು ಈ ಸೂರಿ ಈರ್ವರಿಗೆ

ಅನಘಮಧ್ವಸ್ಥ ಶ್ರೀ ಹಂಸ ವೇದವ್ಯಾಸ

ತಾನೇ ಸತ್ಯವರ ದ್ವಾರ ಉಪದೇಶ ಕೊಟ್ಟ 3

ಪೂರ್ವಾಶ್ರಮ ನಾಮ ಜಯತೀರ್ಥಾಂಕಿತದಲ್ಲಿ

ತತ್ವಪ್ರಕಾಶಿಕ ಸುಧಾ ಟಿಪ್ಪಣಿಯ

ಮೂವತ್ತು ಪ್ರಕರಣ ಶ್ರೀ ಭಾಗವತ - ಸಾರೋ

ದ್ಧಾರವ ಶೋಡಶಿ ಚತುರ್ದಶಿ ಬರೆದಿಹರು 4

ತತ್ವಬೋಧಕ ಸ್ತೋತ್ರ ಬಿನ್ನಹ ರೂಪವು

ಆಧ್ಯಾತ್ಮ ರಸರಂಜಿನಿ ಅಮೃತಫÉೀಣ

ಭಕ್ತಿಯಲಿ ಪಠಿಸಲು ಅಪರೋಕ್ಷ್ಯ ಪುರುಷಾರ್ಥ

ಸಾಧನವಾಗಿಹುದನ್ನು ರಚಿಸಿಹರು ಇವರು 5

ಹದಿನಾರು ಪ್ರಕರಣ ಶೋಡಶಿ ಎಂಬುzರÀಲಿ

ಹದಿನಾಲ್ಕು ಪ್ರಕರಣ ಚತುರ್ದಶಿಯಲ್ಲಿ ಬಂಧ

ಮೋಕ್ಷಾಂತ ಶೋಡಶಿಯಲ್ಲಿಹುದು

ಭಕ್ತಿ ಶುಚಿಯಲಿ ಪಠನೀಯ ರಹಸ್ಯವು 6

ಬಂಧಕವು ಬಂಧ ನಿವೃತ್ತಿಯು ಬಿಂಬ

ಪ್ರತಿಬಿಂಬ ಭಾವವು, ಬಿಂಬಸಂಸ್ಥಾಪನವು

ಐದನೇ ಪ್ರಕರಣ ಸ್ಥೂಲ ದೇಹ ಸೃಷ್ಟಿಯು,

ಅವಸ್ಥಾತ್ರಯ ನಿರ್ಮಾಣ ಆರನೆಯದು 7

ಪ್ರಾಣವ್ಯಾಪಾರವು ಭೋಜನ ಪ್ರಕರಣವು

ಇಂದ್ರಿಯ ವ್ಯಾಪಾರವು ತತ್ವಕಾರ್ಯಹತ್ತು

ತನು ಅಧಿಷ್ಠಾನ ರಥಾಧಿ ಪ್ರಕರಣವು

ಹನ್ನೆರಡಲಿ ಬೋಧ್ಯ ಜಾಗೃತ್ ಪ್ರಕರಣವು 8

ಸ್ವಪ್ನವು ಸುಷುಪ್ತಿಯು ಗಮನಾಗಮನವು

ಇನಿತು ಶುಭ ಮೋಕ್ಷ ಪ್ರಕರಣ ಷೋಡಶವು

ಇನ್ನು ಚತುರ್ದಶಿಯಲಿ ಜೀವಹೋಮ ಮೊದಲಾಗಿ

ರತ್ನಗಳು ಗುರು ಪ್ರಸಾದ ಲಾಭ ಪರ್ಯಂತ 9

ಜೀವಹೋಮ - ಉಪನಯನ ಸೂರ್ಯಗತಿ ಯಜ್ಞ

ಪವಿತ್ರತಮ ವೇದಾಧ್ಯಯನ ಭಿಕ್ಷಾಟನ

ವೈಶ್ವಾನರ ಪ್ರಿಯ ಭೋಜನ ಪಾಪಲೇಪ

ಜೀವ ಪ್ರಯಾಣ ಮಾರ್ಗವು ನವಮ 10

ಹತ್ತನೆಯದು ಬ್ರಹ್ಮಯಜ್ಞಲಯ ಚಿಂತನಾಕ್ರಮ

ಶುದ್ಧಯಜ್ಞ `ಸ್ವರೂಪಯಜ್ಞ' ಸುಲಭಪೂಜಾ

ಹದಿನಾಲ್ಕಲಿ ಗುರುಪ್ರಾಸಾದ ಲಾಭದಲಿ

ಆದಿತ್ಯಗ ಮಧು ಸುಖ ಪೂರ್ಣ ವಿಷಯ 11

ಯೋಗ್ಯ ಆಧಿಕಾರಿಗೆ ಮಾತ್ರ ಈಸೌ -

ಭಾಗ್ಯಪ್ರದ e್ಞÁನ ಪುಷ್ಠಿಕರಣ

ಯುಗುಳ ಮಾತ್ರೆಗಳನ್ನ ವಿನಿಯೋಗಿಸುವುದು

ಅಯೋಗ್ಯರಿಗೆ ಸರ್ವಥಾ ಕೊಡಕೂಡದು 12

ಕೃತ ಕೃತ್ಯ ಧನ್ಯಮನದಿಂದಲಿ ಈ ಮಹಾನ್

ಐದಿಹರಿಪುರಲಯವ ಚಿಂತನೆಮಾಡಿ

ಹದಿನೇಳ್ ನೂರಿಪ್ಪತ್ತೆಂಟು ಶಕ ಮಾಘ

ತ್ರಯೋದಶಿ ಕೃಷ್ಣದಲಿ ಕೃಷ್ಣನ ಸೇರಿದರು 13

ಮತ್ತೊಂದು ಅಂಶದಿ ವೃಂದಾವನದಿಹರು

ಭಕ್ತಿಯಿಂ ಸ್ಮರಿಸಿದರೆ ಬಂದು ಸಲಹುವರು

ಮಾದನೂರು ಕ್ಷೇತ್ರಸ್ಥ ವೃಂದಾವನ ಸೇವೆ

ಭಕ್ತಿಯಲಿ ಮಾಳ್ಪರು ದೇಶ ದೇಶ ಜನರು 14

ಬೃಹತೀಸಹಸ್ರ ಪ್ರಿಯ ಮಹಿದಾಸ ಜಗದೀಶ

ಬ್ರಹ್ಮಪಿತ ಭಕ್ತಪಾಲಕ ಪರಮ ಹಂಸ

`ಮಹಿಸಿರಿ' ಶ್ರೀ ಪ್ರಸನ್ನ ಶ್ರೀನಿವಾಸನ

ಮಹಾಭಕ್ತಿ ಶ್ರೀ ವಿಷ್ಣು ತೀರ್ಥಾರ್ಯರೇ ಶರಣು 15 ಪ

|| ಸಂಪೂರ್ಣಂ||

***