ankita ಸಿರಿನಾರಾಯಣ
ರಾಗ: ಜಯಜಯವಂತಿ ತಾಳ: ಕೇರವಾ
ಪೊರೆಯೋ ಶ್ರೀರಾಘವೇಂದ್ರ ಸದ್ಗುಣ ಸಾಂದ್ರ
ತ್ವರಿತದಿ ಭಜಿಪೆನು ಸುರಗುರು ಕುಲಚಂದ್ರ ಪ
ಪಾಪವ ಕಳೆದೆನ್ನ ಶ್ರೀಪತಿ ಧ್ಯಾನಕೆ
ಲೋಪವಾಗದ ಜ್ಞಾನ ದೀಪವ ಹಚ್ಚಿ ನೀ 1
ನಾನು ಎಂಬುದ ಬಿಟ್ಟು ಜ್ಞಾನಿಗಳೊಡಗೂಡಿ
ಶ್ರೀನಿಧಿ ನಾಮಾಮೃತ ಪಾನವ ಮಾಡಿಸೆ 2
ವರ ಮಂತ್ರಾಲಯ ವಾಸ ಸಿರಿನಾರಾಯಣ ದಾಸ
ಸ್ಮರಿಪ ಭಕ್ತರ ಪೋಷ ಸ್ಥಿರ ಕರುಣಿಸು ತೋಷ 3
***