Showing posts with label ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ muddumohana vittala. Show all posts
Showing posts with label ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ muddumohana vittala. Show all posts

Sunday, 1 August 2021

ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ ankita muddumohana vittala

    ..

kruti by muddumohana dasaru 


ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ

ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ


ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು

ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು 1


ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ

ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ 2


ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ

ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು 3


ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ

ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ 4


ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ

ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ 5

***