Showing posts with label ಚಿಂತಾಮಣಿಗಮಿತ ಚಿಂತಾಮಣಿ ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ prasannashreenivasa. Show all posts
Showing posts with label ಚಿಂತಾಮಣಿಗಮಿತ ಚಿಂತಾಮಣಿ ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ prasannashreenivasa. Show all posts

Thursday, 5 August 2021

ಚಿಂತಾಮಣಿಗಮಿತ ಚಿಂತಾಮಣಿ ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ ankita prasannashreenivasa

 ..

kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು


ಚಿಂತಾಮಣಿಗಮಿತ ಚಿಂತಾಮಣಿ

ಚಿಂತಲವಾಡಿ ಶ್ರೀ ನೃಸಿಂಹಸ್ವಾಮಿ ಪ


ಕಂತುಪಿತ ಕೊಟ್ಟರುವ ಸಾಮಥ್ರ್ಯದಿಂದಲೇ

ಚಿಂತಾಮಣಿಯು ಐಹಿಕ ವಸ್ತುವೀವುದು

ಅನಂತ ಶ್ರೀಪತಿ ಚಿಂತಲವಾಡಿ ಕರುಣಿ ಸ್ವ -

ತಂತ್ರನು ಇಹಪರದಿ ಐಶ್ವರ್ಯವ 1


ಕಾಕುಮನ ವಾಕ್ಕಾಯ ಶುದ್ಧ ಮಾಡುವ ದೇವಿ

ಶ್ರೀ ಕಾವೇರಿ ತೀರದಲಿ ಕುಳಿತು ಸರ್ವ

ಭಕುತರಿಗೆ ವರವೀವ ಶ್ರೀಕಾಂತ ನರಸಿಂಹ

ಸುಖಜ್ಞಾನಮಯ ದೋಷದೂರ ಗುಣನಿಧಿಯು 2


ಮಮಕಾರ ಅಹಂಕಾರ ಡಂಭತನವನು ಬಿಟ್ಟು

ಮಮಸ್ವಾಮಿ ಸರ್ವರಿಗೂ ಪರಮೈಕಸ್ವಾಮಿಯು

ಸುಮನಸಾರ್ಚಿತ ಕುಸುಮಸಂಭವನ ತಾತನು

ರಮಾಪತಿ ಪ್ರಸನ್ನ ಶ್ರೀನಿವಾಸ ನಮೋ ಎನ್ನಿ 3

***