Showing posts with label ಹನುಮಂತನ ಬಲಗೊಂಡರೆ vijaya vittala ankita suladi ಹನುಮಂತ ದೇವ ಸ್ತೋತ್ರ ಸುಳಾದಿ HANUMANTANA BALAGONDARE PRANADEVA SULADI. Show all posts
Showing posts with label ಹನುಮಂತನ ಬಲಗೊಂಡರೆ vijaya vittala ankita suladi ಹನುಮಂತ ದೇವ ಸ್ತೋತ್ರ ಸುಳಾದಿ HANUMANTANA BALAGONDARE PRANADEVA SULADI. Show all posts

Monday, 9 December 2019

ಹನುಮಂತನ ಬಲಗೊಂಡರೆ vijaya vittala ankita suladi ಹನುಮಂತ ದೇವ ಸ್ತೋತ್ರ ಸುಳಾದಿ HANUMANTANA BALAGONDARE PRANADEVA SULADI


Audio by Vidwan Sumukh Moudgalya

ಶ್ರೀ ಪುರಂದರದಾಸಾರ್ಯ ವಿರಚಿತ  ಶ್ರೀ ಹನುಮಂತ ದೇವರ ಸ್ತೋತ್ರ ಸುಳಾದಿ 

 ರಾಗ : ಅಭೇರಿ 

 ಧೃವತಾಳ 

ಹನುಮಂತನ ಬಲಗೊಂಡರೆ ಹರಿಪಾದ
 ಸೇವೆಯು ದೊರಕೊಂಬೋದೊ
ಹನುಮಂತನ ಬಲಗೊಂಡರೆ ನವ ವಿಧ 
ಭಕುತಿಯು ದೊರಕೊಂಬುದೊ
ಹನುಮಂತನ ಬಲಗೊಂಡರೆ ತಾರತಮ್ಯ
 ಪಂಚಭೇದ ಜ್ಞಾನ ದೊರಕೊಂಬುದೊ
ಹನುಮಂತನ ಬಲಗೊಂಡರೆ ದಯದಿಂದ 
 ಪುರಂದರವಿಠ್ಠಲನೇ ಕೈಯ ಪಿಡಿವಾ ॥೧॥

 ಮಟ್ಟತಾಳ 

ಹನುಮಂತನ ಕಾಣದೆ ವಾಲಿ ಬಳಲಿದ 
ಹನುಮಂತನ ಕಂಡು ಸುಗ್ರೀವ ಬದುಕಿದ 
ಹನುಮಂತನ ಪ್ರಿಯ ಪುರಂದರವಿಠ್ಠಲ ॥೩॥

 ಝಂಪೆತಾಳ 

ಎಂದೆಂದೂ ತನ್ನ ಮನ ಅಗಲದೆ ಇರು ಎಂದು
ಅಂದೆ ಇತ್ತನು ಬೊಮ್ಮ ಪದವಿ ಹನುಮಂತಗೆ
ತಂದೆ ಶ್ರೀರಾಮಚಂದ್ರ ಪುರಂದರವಿಠ್ಠಲ 
ಅಂದೆ ಇತ್ತನು ಬೊಮ್ಮ ಪದವಿ ಹನುಮಂತಗೆ ॥೩॥

 ಅಟ್ಟತಾಳ 

ರೋಮ ಕೋಟಿಲಿಂಗ ಹೇಮ ಕುಂಡಲಧರ
ಭೀಮ ಒಡಿಯ ಬೆಳೆದನು ಬ್ರಹ್ಮಾಂಡಕ್ಕೆ
ಸ್ವಾಮಿ ಪುರಂದರವಿಠಲನ್ನ ನಿಜದೂತ
ರೋಮ ಕೋಟಿಲಿಂಗ ಹೇಮಕುಂಡಲಧರಾ ॥೪॥

 ಆದಿತಾಳ 

ಹಬ್ಬಿದರ್ಜುನನ ಧ್ವಜಾಗ್ರಕೆ 
ಬೊಬ್ಬಿಟ್ಟು ಬಾಹು ಪರ ಬಲ ಬರಿದು ಮಾಡಿದ
ಸುಬ್ಬಲ ಸೂರೆಗೊಂಡನು ಹನುಮಂತ
 ಪುರಂದರವಿಠ್ಠಲನ ಬಲು  ಬಂಟ ಹನುಮಂತ ॥೫॥

 ಜತೆ 

ವಿಜಯೀಭವ ಹನುಮಂತ ವಿಜಯೀಭವ ಗುಣವಂತ
ವಿಜಯೀಭವ  ಪುರಂದರವಿಠಲರೇಯನ 
ಬಲುಬಂಟ ಹನುಮಂತ ॥೬॥
**********


ಶ್ರೀ ಪುರಂದರದಾಸರು ರಚಿಸಿದ  ಶ್ರೀ ಹನುಮಂತ ದೇವರ ಸುಳಾದಿ

ಹನುಮಂತನ ಬಲಗೊಂಡರೆ -
ಹರಿಪದ ಸೇವೆ ದೊರಕೊಂಬುದು

ಹನುಮಂತನ ಬಲಗೊಂಡರೆ ನವ ವಿಧ 
ಭಕುತಿಯು ದೊರಕೊಂಬುದು

ಹನುಮಂತನ ಬಲಗೊಂಡರೆ 
ತಾರತಮ್ಯ ಪಂಚಭೇದ ಜ್ಞಾನ ದೊರಕೊಂಬುದು

ಹನುಮಂತನ ಬಲಗೊಂಡರೆ ದಯದಿಂದ 
ಪುರಂದರ ವಿಠ್ಠಲ ತಾ ಕೈ ಪಿಡಿವ//

ಹನುಮಂತನ ಕಾಣದೆ ವಾಲಿ ಬಳಲಿದ 
ಹನುಮಂತನ ಕಂಡು ಸುಗ್ರೀವ ಬದುಕಿದ 
ಹನುಮಂತನ ಪ್ರಿಯ ಪುರಂದರ ವಿಠ್ಠಲ.//

ಎಂದೆಂದೂ ತನ್ನ ಮನವಗಲದೆ ಇರು ಎಂದು
ಅಂದೆ ಇತ್ತನು ಬೊಮ್ಮ ಪದವಿ ಹನುಮಂತಗೆ

ತಂದೆ ಶ್ರೀರಾಮಚಂದ್ರ ಪುರಂದರ ವಿಠ್ಠಲ
ಅಂದೆ ಇತ್ತನು ಬೊಮ್ಮ ಪದವಿ ಹನುಮಂತಗೆ //

ಹಬ್ಬಿದರ್ಜುನನ ಧ್ವಜಾಗ್ರಕೆ 
ಬೊಬ್ಬಿಟ್ಟು ಬಾಹು ಪರ ಬಲ ಬರಿದು ಮಾಡಿದ

ಸಬ್ಬಲ ಸೂರೆಗೊಂಡನು ಹನುಮಂತ
ಪುರಂದರ ವಿಠ್ಠಲ ನ ಬಂಟ ಹನುಮಂತ//.

ರೋಮಕೋಟಿ ಲಿಂಗ ಹೇಮಕುಂಡಲಧರ
ಭೀಮ ಒಡೆಯ ಬೆಳೆದನು ಬ್ರಹ್ಮಾಂಡ ಕೆ
ಸ್ವಾಮಿ ಪುರಂದರ ವಿಠ್ಠಲ ರೇಯನ ನಿಜದೂತ ಹನುಮಂತ//.

ವಿಜಯೀಭವ ಹನುಮಂತ ವಿಜಯೀ ಭವ ಗುಣವಂತ
ವಿಜಯೀಭವ  ಪುರಂದರ ವಿಠಲ ನ ಬಲು ಬಂಟ ಹನುಮಂತ //.

ಇದು ಹನುಮದವತಾರದ ಸ್ತುತಿ
********