ಪುರಂದರದಾಸರು
ಬಲ್ಲಿದ ನೀನೆಂದು ಬಡವರ ಬಾಯನು ಬಡಿಯದಿರೆಚ್ಚರಿಕೆಎಳ್ಳಷ್ಟು ತಪ್ಪಿದರೆ ಯಮನವರೆಳೆದೊಯ್ವರು ಎಚ್ಚರಿಕೆಚ್ಚರಿಕೆ ಪ.
ಮಾಡು ದಾನ - ಧರ್ಮಪರ ಉಪಕಾರವ ಮರೆಯದಿರೆಚ್ಚರಿಕೆಕೇಡ ನೆಣಿಸಬೇಡ ನಂಬಿದ ಠಾವಿಗೆ ಕೆಡುವೆ ಮತ್ತೆಚ್ಚರಿಕೆಮೂಢರ ಒಡನಾಡಿ ಮುಂದರಿಯದೆ ನೀನು ಮುನಿಯದಿರೆಚ್ಚರಿಕೆನೋಡಿ ನಡೆವ ಸುಗುಣರ ನೋಡಿ ನಡೆಯೊನೀ ನಟನೆ ಬೇಡಚ್ಚರಿಕೆ 1
ಹೊನ್ನ - ಹೆಣ್ಣು - ಮಣ್ಣು ತನ್ನನೆಅಣಕಿಸಿ ಹೋಹುವು ಎಚ್ಚರಿಕೆಮುನ್ನ ಮಾಡಿದ ಫಲದಿಂದಲಿ ಬಂದೆಯೊ ಮುಂದೆ ಇನ್ನಚ್ಚರಿಕೆಚೆನ್ನಾಗಿ ತಾ ಬಾಳಿ ಬದುಕುವೆನೆಂತೆಂಬ ಚೇಷ್ಟೆ ಬೇಡೆಚ್ಚರಿಕೆಬೆನ್ನನು ಬಡಿಯದೆ ಬಿಡುವರೆ ಯಮನವರು ಮರೆಯದಿರೆಚ್ಚರಿಕೆ 2
ಬಾಳಿ ಬದುಕಿ ಸಿರಿವಾಹಗೆ ಟವಳಿಯಬಣಗು ಬೇಡದೆಚ್ಚರಿಕೆಹಾಳು ಬದುಕಿಗಾಗಿ ಹಲವರ ಕೂಡಣ ಹಗಣ ಬೇಡಚ್ಚರಿಕೆಕಾಲನವರು ಬಂದುಆವಾಗ ಕರೆವರೊ ಕಾಣದು ಎಚ್ಚರಿಕೆಶ್ರೀಲೋಲ ಪುರಂದರವಿಠಲರಾಯನ ಮರೆಯದಿರೆಚ್ಚರಿಕೆ 3
********