Showing posts with label ವಾಸುದೇವ ಎನ್ನ ಘಾಸಿಗೊಳಿಸದೆ gopalakrishna vittala. Show all posts
Showing posts with label ವಾಸುದೇವ ಎನ್ನ ಘಾಸಿಗೊಳಿಸದೆ gopalakrishna vittala. Show all posts

Monday, 2 August 2021

ವಾಸುದೇವ ಎನ್ನ ಘಾಸಿಗೊಳಿಸದೆ ankita gopalakrishna vittala

ವಾಸುದೇವ ಎನ್ನ ಘಾಸಿಗೊಳಿಸದೆ

ನೀ ಸಲಹಲಿ ಬೇಕೊ ಪ.


ಈ ಶರೀರದೊಳು ಮಾಯಾಸಹಿತ-

ದಿ ಶ್ವಾಸನಾಡಿಯೊಳು ವಾಸವಾಗಿಹ ಅ.ಪ.


ಅನಿರುದ್ಧ ದೇಹದಿ ಅನಿರುದ್ಧ ನಾಮದಿ

ಅನುದಿನ ಸಲಹುತಲಿ

ದನುಜನಾದ ಪಾಪಾತ್ಮನ ನಾಭಿಯೊಳ್

ಅನಿಲನಿಂದಲಿ ಶೋಷಿಸುವೆ ಪ್ರದ್ಯುಮ್ನ 1

ಹೃದಯದಿ ರಕ್ತವರ್ಣದಲಿ ನೀನಿರುತಲಿ ಸಂಕರ್ಷಣನೆನಿಸಿ

ಪದೋಪದಿಗೆ ಪಾಪಾತ್ಮಕನನು ಸುಟ್ಟು

ಸದಮಲ ಹೃದಯವ

ಶುದ್ಧಿಗೈಯ್ಯುವ 2

ಮಧ್ಯದಿ ನಾಡಿಯ ಮಧ್ಯದ ಹೃದಯ ಪದ್ಮ

ಮಧ್ಯ ಎಂಟು ದಳದಿ

ವಿದ್ಯಮಾನನಾಗಿ ಬಿಂಬನೆನಿಸಿ ನಿನ್ನ

ಪೊದ್ದಿಹ ಜೀವರ ಭಾವನೆಯಂತೆ ಕಾಂಬೆ 3

ಕೊಳಲನೂದುವ ನಿನ್ನ ಚಲುವರೂಪದ ಕಾಂತಿ

ಪೊಳಲೆಲ್ಲ ತುಂಬುವುದೊ

ನಳಿನಾಕ್ಷಿಯರ ಕೂಡಿ ಥಳಥಳಪ ನಿನ್ನ

ಬಲು ಸಂಭ್ರಮದೊಳು ಸುರರೆಲ್ಲ ಸ್ತುತಿಪರೊ 4

ಶಿರದಲ್ಲಿ ದ್ವಾದಶ ವರದಳ ಪದ್ಮದಿ

ಸಿರಿ ಸಹಿತದಿ ಇರುವೆ

ವರನಾಡಿ ಮಾರ್ಗದಿ ಅರಿತು ಭಜಿಸೆ ಮುಕ್ತಿ

ಪೊರೆಯುವ ಬಿರುದುಳ್ಳ ಗೋಪಾಲಕೃಷ್ಣವಿಠ್ಠಲ5

****