ಕೃತಿ ಕಾಖಂಡಕಿ ಕೃಷ್ಣದಾಸರು
ಉಬ್ಬುವದ್ಯಾಕೋ ಮದದಲಿ ಪ
ಎರಡು ದಿನದ ಛಂದ ಮರನ್ಯಾಡಿ ತೋರುತ ಜರೆ ಬಂದು ನೂಕಲು ಮರಳುವ ಪ್ರಾಯದಿ 1
ಲೆಕ್ಕವಿಲ್ಲದೆ ಗದ್ದಿಗಿಕ್ಕಿದ ಜಲದಂತೆ ಪುಕ್ಕಟೆ ಜಾರುತ ದಕ್ಕದ ಧನದಿಂದ 2
ಬುದ್ಧಿಲಿ ಬಹುಜನ ಗೆದ್ದನು ಮದದಿ ಬಿದ್ದೋಗು ಕಾಲಕ ಸದ್ದಿಲ್ಲ ವಿದ್ಯದಿ 3
ಉಬ್ಬುವ ಕೊಬ್ಬುವ ಹಬ್ಬುವ ಸುಖದಿಂದ ಜಬ್ಬರ ಮಾಡುತಾ ರುಬ್ಬುವ ಕಾಲನು 4
ತಂದೆ ಮಹಿಪತಿ ನಂದನು ಸಾರಿದಾ ದ್ವಂದ್ವಗಳೆದು ಗೋವಿಂದನ ನೆನೆಯದೆ 5
***