(ಹರಿಯ ನೆನೆವ ಪರಿ)
ಒಂಬತ್ತು ಭಕ್ತಿಲಿ ನೆನೆ
ಒಂಬತ್ತೊಂದು ಅವತಾರದ ಹರಿಯ
ಒಂಬತ್ತಮೂರು ನಕ್ಷತ್ರಗಳ ನೆನೆಬಿಡದೆ
ಒಂಬತ್ತೆರಡು ಪುರಾಣಗಳ
ಒಂಬತ್ತೊಂದು ದಿಕ್ಕಿಲಿ ಭಜಿಸು
ಒಂಬತ್ತು ಮ್ಯಾಲೈದು ಲೋಕದೊಡೆಯನ ಸತತ||
1ಒಂದೆ ಮನದಲಿ
2 ಎರಡು ತತ್ವವ ತಿಳಿದು
3 ಮೂರು ನಾಮದವನ ನೆನೆದು
4 ನಾಲ್ಕು ಮುಖದ ಬ್ರಹ್ಮನ ಭಜಿಸಿ
5 ಐದು ಇಂದ್ರಿಯಗಳ ಜಯಿಸಿ
6 ಆರು ಮುಖದ ತಂದೆಯ ಸಖನ ಧ್ಯಾನಿಸಿ
7 ಏಳು ದಿನದ ಕಥೆಯ ಕೇಳಿ
8 ಎಂಟು ದಕ್ಕಿಲಿ ಭಜಿಸಿ
9 ಒಂಬತ್ತು ವಿಧದ ಭಕ್ತಿಯಿಂದ
10 ಹತ್ತು ಅವತಾರದ ಹರಿಯ ನೆನೆ ಸತತ||
ಹತ್ತು ಅವತಾರದ ಹರಿಯ
ಹೊತ್ತು ಹೊತ್ತಿಗೆ ನೆನೆ
ತುತ್ತು ತುತ್ತಿಗೆ ಗೋವಿಂದ ಎನ್ನುತ್ತ
ಚಿತ್ತ ಶುಧ್ಧಿಯಲಿಂದ
ಬಿತ್ತರಿಸು ಕಥೆಗಳ
ಸತ್ಯ ಸಂಕಲ್ಪ ಒಲಿವ ಮಧ್ವೇಶ ಕೃಷ್ಣ ||
~~~~~~~~ಹರೇ ಶ್ರೀನಿವಾಸ
***