Showing posts with label ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ indiresha. Show all posts
Showing posts with label ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ indiresha. Show all posts

Monday, 2 August 2021

ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ ankita indiresha

ಮಂಗಳಾರತಿ ಎತ್ತಿರೀತಗೆ ಮಾನಿನೀಯರು ಹರಿಗೆ ಪ

ಕೃಷ್ಣಗೆ ಮಾನಿನೀಯರು ಕಂಗಳಿಂದಲೆ ನೋಡಿಸುಖಿಸಿ ಕಮಲಮುಖಿಯರು ಅ.ಪ.


ಕಿರೀಟ ಕುಂಡಲ ಹಾರ ಪದಕ ಧರಿಸಿ ಕುಳಿತಿಹಾಪದಕ ಧರಿಸಿ ಕುಳಿತಿಹಾಸರಸಿಜಾಕ್ಷನೋಳ್ಪಜನನೆ ಹರುಷ ಕೊಡುತಿಹಾ 1

ಕಡಗ ಕಂಕಣ ವಂಕಿ ನಾಗಮುರಿಗೆ ಪೊಳೆವುದುನಾಗಮುರಿಗೆ ಪೊಳೆವುದುಜರದಗೊಂಡೆ ತಾಯತ ಮುತ್ತು ಸಿರಿಯು ತೂಗೊದು 2

ಕಾಲಕಡಗ ರುಳಿಯು ಗೆಜ್ಜೆ ಸಾಲು ಚರಣದಿಗೆಜ್ಜೆ ಸಾಲು ಚರಣದಿಭಾಳ ದನಿಯ ಮಾಡುತಿಹುದು ಕೇಳಿ ಕರ್ಣದಿ 3

ಕನಕ ವಸನ ಹೀರ ಕಾಂಚಿ ಕಟಿಯ ತಟದಲಿಕಾಂಚಿ ಕಟಿಯ ತಟದಲಿಮಿಂಚಿನಂತೆ ಮಿನುಗುತಿಹದೊ ನೋಡಿ ಸುಖದಲಿ 4

ಬೊಟ್ಟು ಹಿಡಿದು ಬಾಲನಿಂದ ಚರಿಸಿದಂದದಿಹಿಡಿದು ಬರಿಸಿದಂದದಿಕೃಷ್ಣ ವಿಷ್ಣು ಜಯದ ಸಿರಿಯು ಕೃಷ್ಣ ಜನ್ಯದೀ 5

ತ್ವರದಿ ಪಾರ್ಥ ರಥದಿ ಕುಳಿತು ತುರಗ ನಡೆಸುವಾಪಾರ್ಥನ ತುರಗ ನಡೆಸುವಾಕರದಿ ಕರವ ಪಿಡಿದು ಹಯದ ಷಣಶ ತಿರುಗುವಾ 6

ಧರಣಿಪಾಲರ ನೋಡಿ ಆಯುಷ್ಯ ಹರಣ ಮಾಡಿದಆಯುಷ್ಯ ಹರಣ ಮಾಡಿದಧುರದಿ ಪಾರ್ಥನ ಹೆಸರು ಮಾಡಿ ಹರಿಯ ನಡೆಸಿದಾ7

ಹರಿಯು ಮುಖವ ನೋಡಿ ರಾಜರು ಹರುಷಬಟ್ಟರುರಾಜರು ಹರುಷಬಟ್ಟರುಮುಖವ ದಯದಿ ಮೋಕ್ಷದ ಸಿರಿಯನುಂಡೆಯೋ 8

ನಂದಬಾಲ ನಿನ್ನ ಮುಖವ ಎಂದು ನೋಡುವೆಮುಖವ ಎಂದು ನೋಡುವೆಇಂದಿರೇಶ ಮನದಿ ನಿತ್ಯ ತಂದು ಸುಖಿಸುವೆ 9

****