.. by ಗುರುಪ್ರಾಣೇಶ ವಿಠಲ
ಸುವ್ವಿ ಪದ
ಪಂಚಶರ ಪಿತನೆ ಅಹಿಮಂಚದಲಿ ಮಲಗಿಹನೆ |ಪಂಚಾನನಾದಿ ಸುರವಂದ್ಯ | ಸುರವಂದ್ಯ ದುರಿತಾರಿ |ಪಂಚಾಸ್ಯ ವದನ ಸಲಹೆಮ್ಮ 1
ಅಂಬುಜಾಸನ ವಾಯು ಶಂಭುಸುರಮುಖ ಪೂಜ್ಯ |ಅಂಬುಜಾನಾಭಿ ಅರ್ಕಾಭಾ | ಅರ್ಕಾಭಾ ಎನ್ನ ಕು- |ಟುಂಬ ಸಲಹುವದೊ ನರಸಿಂಹ 2
ಘೋರ ದುರಿತಗಳ ಪರಿಹಾರ ಮಾಳ್ಪರ ಕಾಣೆ |ನಾರಸಿಂಹನೆ ನಿನ್ನ ವ್ಯತಿರಿಕ್ತ | ವ್ಯತಿರಿಕ್ತ |ಕಾರುಣ್ಯಸಿಂಧು ಸಂಸಾರಾಬ್ಧಿಯಿಂದ ಕಡೆಗೆತ್ತೊ 3
ಕಲಿಕಲುಷದಿಂ ಮನಸು ಮಲಿನವಾಗಿದೆ ದೇವಉಳಿವ ಬಗಿ ಕಾಣೆ ಕಲಿಕಾಲ | ಕಲಿಕಾಲ ಕರುಣ |ದಲಿ ಸಲಹುವದು ನೀನೆ ಬಲ್ಲಿ 4
ನೀನೊಲಿದು ಕೊಟ್ಟದ್ದು ಏನಾದರೂ ಇರಲಿ |ಸಾನುರಾಗದಲಿ ಸವಿವಂಥ | ಸವಿವಂಥ ಮತಿ | ಇತ್ತು ಗುರು ಪ್ರಾಣೇಶ ವಿಠಲಾ ಪೊರಿಯಮ್ಮಾ5
***