.. by ಗುರುಪ್ರಾಣೇಶ ವಿಠಲ
ಸುವ್ವಿ ಪದ
ರಾಗ – : ತಾಳ –
ಪಂಚಶರಪಿತನೆ ಅಹಿಮಂಚದಲಿ ಮಲಗಿಹನೆ l
ಪಂಚಾನನಾದಿ ಸುರವಂದ್ಯ l ಸುರವಂದ್ಯ ದುರಿತಾರಿ l
ಪಂಚಾಶ್ಯ ವದನ ಸಲಹೆಮ್ಮ ll ೧ ll
ಅಂಬುಜಾಸನ ವಾಯು ಶಂಭುಸುರಮುಖ ಪೂಜ್ಯ l
ಅಂಬುಜನಾಭಾ ಅರ್ಕಾಭಾ l ಅರ್ಕಾಭಾ ಯನ್ನ ಕು l
ಟುಂಬ ಸಲಹುವದೋ ನರಸಿಂಹಾ ll ೨ ll
ಘೋರ ದುರಿತಗಳ ಪರಿಹಾರ ಮಾಳ್ಪರ ಕಾಣೆ l
ನಾರಸಿಂಹನೆ ನಿನ್ವೆತಿರಿಕ್ತಾ l ವ್ಯತಿರಿಕ್ತ ಕಾರುಣ್ಯಸಿಂಧು ಸಂ l
ಸಾರಾಬ್ಧಿಯಿಂದಾ ಕಡೆಗೆತ್ತೊ ll ೩ ll
ಕಲಿಕಲುಷದಿಂ ಮನಸು ಮಲಿನವಾಗಿದೆ ದೇವ l
ಉಳಿವ ಬಗೆ ಕಾಣೆ ಕಲಕಾಲ l ಕಲಕಾಲ ಕರುಣದಲಿ l
ಸಲಹುವದು ನೀನೆವೆ ಬಲ್ಲೀ ll ೪ ll
ನೀನೊಲಿದು ಕೊಟ್ಟದ್ದು ಏನಾದರೂ ಇರಲಿ l
ಸಾನುರಾಗದಲಿ ಸವಿವಂಥಾ l ಸವಿವಂಥ ಮತಿ ಇತ್ತು ಗುರುಪ್ರಾ l
ಣೇಶವಿಟ್ಠಲಾ ಪೊರಿಯಮ್ಮಾ ll ೫ ll
***
ಪಂಚಶರ ಪಿತನೆ ಅಹಿಮಂಚದಲಿ ಮಲಗಿಹನೆ |ಪಂಚಾನನಾದಿ ಸುರವಂದ್ಯ | ಸುರವಂದ್ಯ ದುರಿತಾರಿ |ಪಂಚಾಸ್ಯ ವದನ ಸಲಹೆಮ್ಮ 1
ಅಂಬುಜಾಸನ ವಾಯು ಶಂಭುಸುರಮುಖ ಪೂಜ್ಯ |ಅಂಬುಜಾನಾಭಿ ಅರ್ಕಾಭಾ | ಅರ್ಕಾಭಾ ಎನ್ನ ಕು- |ಟುಂಬ ಸಲಹುವದೊ ನರಸಿಂಹ 2
ಘೋರ ದುರಿತಗಳ ಪರಿಹಾರ ಮಾಳ್ಪರ ಕಾಣೆ |ನಾರಸಿಂಹನೆ ನಿನ್ನ ವ್ಯತಿರಿಕ್ತ | ವ್ಯತಿರಿಕ್ತ |ಕಾರುಣ್ಯಸಿಂಧು ಸಂಸಾರಾಬ್ಧಿಯಿಂದ ಕಡೆಗೆತ್ತೊ 3
ಕಲಿಕಲುಷದಿಂ ಮನಸು ಮಲಿನವಾಗಿದೆ ದೇವಉಳಿವ ಬಗಿ ಕಾಣೆ ಕಲಿಕಾಲ | ಕಲಿಕಾಲ ಕರುಣ |ದಲಿ ಸಲಹುವದು ನೀನೆ ಬಲ್ಲಿ 4
ನೀನೊಲಿದು ಕೊಟ್ಟದ್ದು ಏನಾದರೂ ಇರಲಿ |ಸಾನುರಾಗದಲಿ ಸವಿವಂಥ | ಸವಿವಂಥ ಮತಿ | ಇತ್ತು ಗುರು ಪ್ರಾಣೇಶ ವಿಠಲಾ ಪೊರಿಯಮ್ಮಾ5
***
No comments:
Post a Comment