ಬಂಧನದ ಪರಿ ಏನೋ ಬಾಲ ಹನುಮ ಪ.
ಬಂಧಿಸಿದರಾರಿಲ್ಲಿ ನಿನ್ನ ಹನುಮ ಅ.ಪ.
ಒಂದು ಸಲ ನೋಡುವೆನೆ ಬ್ರಹ್ಮಾಸ್ತ್ರವಲ್ಲವಿದು
ಒಂದು ಸಲ ನೋಡುವೆನೆ ಅಜಗರವಿದಲ್ಲ
ಒಂದು ಸಲ ನೋಡುವೆನೆ ಕಳ್ಳ ಗುಂಪಲ್ಲವಿದು
ಒಂದೆರಡು ಕೋಣವೆರಡರ ಮಧ್ಯೆ ಇರುವ 1
ಕ್ಷಣಕೆ ಪರಿಹರವಾಯ್ತು ಹಿಂದೆ ಆ ಬಂಧಗಳು
ಕ್ಷಣಕ್ಷಣಕು ಇದ್ದಂತೆ ಇರುವುದೀ ತೊಡಕು
ಗುಣದಂತೆ ಆವರಣ ವರ್ತುಳಾಕಾರದಲಿ
ತೆನೆಗಳಲಿ ಕೋತಿಗಳ ಕಾವಲಿನ ಕಟ್ಟು 2
ಬೀಸಿದೀ ಬಲೆ ತೆಗೆಯೆ ಶ್ರೀ ಶನಿಗು ಅಳವಲ್ಲ
ವಾಸುದೇವನೆÀ ಬಲ್ಲ ಈ ಮರ್ಮವ
ದಾಸಜನ ಪ್ರಿಯ ಶ್ರೀಗೋಪಾಲಕೃಷ್ಣವಿಠ್ಠಲ
ವ್ಯಾಸರಿಂದಲಿ ನಿನಗೆ ಮೋಸಗೈಸಿದನೋ 3
****