Showing posts with label ಪಾಲಿಸೆನ್ನ ಗುರು ರಾಘವೇಂದ್ರಘನ್ನ prahladavarada vittala. Show all posts
Showing posts with label ಪಾಲಿಸೆನ್ನ ಗುರು ರಾಘವೇಂದ್ರಘನ್ನ prahladavarada vittala. Show all posts

Monday, 6 September 2021

ಪಾಲಿಸೆನ್ನ ಗುರು ರಾಘವೇಂದ್ರಘನ್ನ ankita prahladavarada vittala

 ankita ಪ್ರಹ್ಲಾದವರದ (ವರದಪ್ರಹ್ಲಾದ)ಶ್ರೀಹರಿವಿಠಲ

ರಾಗ: ದೇವಗಾಂಧಾರಿ ತಾಳ: ಆದಿ


ಪಾಲಿಸೆನ್ನ ಗುರು ರಾಘವೇಂದ್ರಘನ್ನ


ಪಾಲಿಸೆನ್ನ ಯತಿರನ್ನ ಪ್ರಸನ್ನ ಸು-

ಪಾಲಶೀಲ ಕೃಪಾಲಯ ಗುರುವೆ ಅ pa


ಸಿರಿನರಹರಿಯ ಕರುಣಾಪಾತ್ರನೆ

ಸುರಚಿರಗಾತ್ರನೆ ವರಪ್ರಹ್ಲಾದನೆ 1

ಇಂದಿರೆಯರಸನ ಛಂದದಿ ಭಜಿಸುವ

ವೃಂದಾರಕಮುನಿ ಸುಂದರಪದಭೃಂಗ 2

ಖಗವಾಹನ ಪದಯುಗ ಭಜಕಾಗ್ರಣಿ 

ನಗೆಮೊಗಯುತ ಪನ್ನಗನಾವೇಶನೆ 3

ದಂಡಧರಿಸಿ ಕಮಂಡಲುಪಿಡಿದ ಉ-

ದ್ದಂಡ ವ್ಯಾಸಮುನಿ ತರ್ಕತಾಂಡವ 4

ನ್ಯಾಯಾಮೃತ ಚಂದ್ರಿಕಾದಿ ಸ-

ನ್ಯಾಯಪ್ರವರ್ತಕ ಸುಯತೀಶ್ವರ 5

ಭಾಸುರಾಂಗ ಮುದ್ದುವ್ಯಾಸಮುನಿಯೆ ನಿನ್ನ

ದಾಸದಾಸರ ದಾಸ ನಾನಯ್ಯ 6

ವಂದಿಪಜನರಘವೃಂದ ಕಳೆವ ಕ-

ರ್ಮಂದಿಗಳರಸ ಶ್ರೀ ರಾಘವೇಂದ್ರ ಗುರುವರ 7

ಅತಿಶಯ ಮಹಿಮೆಯ ಕ್ಷಿತಿಯೊಳು ತೋರುವ

ಪ್ರತಿಮಂತ್ರಾಲಯಸ್ಥಿತ ಯತಿಶಿರೋಮಣಿಯೆ 8

ವರಪ್ರಹ್ಲಾದಶ್ರೀಹರಿವಿಠಲನ

ಕರುಣವನೆಮ್ಮೋಳು ಹರಹುವ ದೊರೆಯೆ 9

***