Showing posts with label ಳಳ- RSS- ಅಭಿನವ ಭಾರತದ ನಿರ್ಮಾಣಕೆ others rss. Show all posts
Showing posts with label ಳಳ- RSS- ಅಭಿನವ ಭಾರತದ ನಿರ್ಮಾಣಕೆ others rss. Show all posts

Friday, 24 December 2021

ಅಭಿನವ ಭಾರತದ ನಿರ್ಮಾಣಕೆ others rss

   

RSS song .

ಅಭಿನವ ಭಾರತದ ನಿರ್ಮಾಣಕೆ

ಯುವಜನ ಶಕ್ತಿಯೆ ಆಧಾರ |

ಯುಗಗಳ ಕನಸಿಗೆ ಆಕಾರ... ನೀಡುವುದೆಮ್ಮಯ ನಿರ್ಧಾರ ||ಪ||


ಆಸೇತು ಹಿಮಾಚಲ ವಿಸ್ತಾರದ

ತಾಯ್ನೆಲ ದೇವರ ವರದಾನ |

ಭಾರತ ಮಾತೆಯ ವೀರ ಸುಪುತ್ರರು

ಎಂಬುವುದೆಮಗೆ ಅಭಿಮಾನ ||೧||


ಋಷಿಮುನಿ ಸಂತರ ಕರ್ಮಭೂಮಿಯಿದು

ಚತುರ್ವೇದಗಳ ತವರೂರು |

ಖಡ್ಗವ ಪಿಡಿದು ನಾಡಿನ ರಕ್ಷಣೆ

ಗೈದಿಹ ಶೂರರ ನೆಲೆವೀಡು ||೨||


ಆಧುನಿಕತೆಯ ವ್ಯಾಮೋಹದಲಿ

ನಮ್ಮತನವನು ತೊರೆಯದಿರಿ |

ವಿಶ್ವಕೆ ದಾರಿಯ ತೋರಿದ ಭಾರತ

ಎಂಬುದನೆಂದೂ ಮರೆಯದಿರಿ ||೩||


ರೋಗ ರುಜಿನಗಳ ಮೌಢ್ಯ ಜಾಡ್ಯಗಳ

ಬೇರು ಸಹಿತ ಕಿತ್ತೆಸೆಯೋಣ

ರಾಷ್ಟ್ರ ಭಕ್ತಿಯ ವಜ್ರಲೇಪದಲಿ

ಹೃದಯ ಹೃದಯಗಳ ಬೆಸೆಯೋಣ ||೪||

***

abhinava bhaaratada nirmANake

yuvajana Saktiye Adhaara |

yugagaLa kanasige Akaara... nIDuvudemmaya nirdhAra ||pa||


AsEtu himAcala vistArada

tAynela dEvara varadAna |

BArata mAteya vIra suputraru

eMbuvudemage aBimAna ||1||


RuShimuni saMtara karmaBUmiyidu

caturvEdagaLa tavarUru |

KaDgava piDidu nADina rakShaNe

gaidiha SUrara nelevIDu ||2||


Adhunikateya vyAmOhadali

nammatanavanu toreyadiri |

viSvake dAriya tOrida BArata

eMbudaneMdU mareyadiri ||3||


rOga rujinagaLa mouDhya jADyagaLa

bEru sahita kitteseyONa

rAShTra Baktiya vajralEpadali

hRudaya hRudayagaLa beseyONa ||4||

***