not to confuse with writings of
ಸುರಪುರದ ಆನಂದ ದಾಸರು ಇವರ ಅಂಕಿತ#ಕಮಲೇಶವಿಠಲ
ಕುಣಿಯುತ ನಲಿಯುತ ಬಾ ಶಂಕರ |
ಮಣಿಯುವೆ ನಿನ್ನಡಿಗಳಿಗೆ ನಾನೆರಗುವೆ ||ಪ||
ಢಮಢಮಢಮ ಎಂದು ಡಮರುಗ ದ್ವಾನಿಸಲು |
ಠಣಠಣಠಣ ಎಂದು ವೃಷಭವು ನಲ್ಲಿಯೇ |
ಝಣ ತಕ ತಕ ಝಣ ತಾಕಿಟ ತಕ ಕಿಟ |
ಝಣ ಎಂದು ನಂದಿ ಮೃದಂಗವ ಬಾರಿಸಲು ||೧||
ಹರ ಹರ ಹರ ಎಂದು ಗಣಗಳು ತುತಿಸೆ |
ಪೊರೆಯಂದಹಿವಿದ್ದು ಗಂಗೆಯು ನಮಿಸೆ |
ಸರಿಗಮಪದನಿಸ ಸ್ವರಗಳು ಪಾಡುತ |
ನಾರದ ತುಂಬುರ ಗಾನವ ಮಾಡಲು ||೨||
ವರಕಮಲೆಶನ ಚರಿತೆಯ ಜಗದೊಳು |
ಪರಿಪರಿ ಭಾವದಿ ನರ್ತಿಸಿ ತೋರುತ |
ಪೊರೆಯುತ ಭಕುತರ ವರವೀಯುತ ಬಾ |
ಗಿರಿಜಾಲಿಂಗಿತ ನಾಟ್ಯಾಚಾರ್ಯ ||೩||
*******