Audio by Vidwan Sumukh Moudgalya
ಶ್ರೀ ಜನಾರ್ದನವಿಟ್ಠಲದಾಸರ ಕೃತಿ
ರಾಗ : ಅಮೃತವರ್ಷಿಣಿ ಖಂಡಛಾಪು
ಅಂಬುಜಾಕ್ಷನ ತೋರೋ ಜಂಬುನಾಥ
ಅಂಬಿಕಾಪತಿ ಎನ್ನ ಅರೆಮರೆಯಗೊಳಿಸದಲೆ ॥ಪ॥
ಸತ್ಯಲೋಕಾಧಿಪನ ಹತ್ತಲಿ ಹಗಲಿರುಳು
ಹೊತ್ತು ಬಿಡದೆ ಕಾರ್ಯ ಮಾಳ್ಪ ಮಂತ್ರೀ
ನಿತ್ಯದಲಿ ಮರ್ತ್ಯಲೋಕದಲ್ಲಿ ಎನಗಿಂದೂ
ತಾತ್ವ ವಿಚಾರ ಮಾಳ್ಪದಕ ಮನವನೆ ಕೊಟ್ಟು ॥೧॥
ಆದಿಯಿಂದಲಿ ಮೋದ ಕೊಡುತಲಿ ಭಕುತರಿಗೆ
ವೇದೋಕ್ತ ಪುರಾಣ ಶಾಸ್ತ್ರರ್ಥದೀ
ಮಾಧವನಾ ಮನದಲ್ಲಿ ಮಹಿಯೊಳಗೆ ನಿಲಿಸಿದ್ದೆ
ಸಾಧಿಸೆನ್ನಯ ಬುದ್ಧಿಗಭಿಮಾನಿದೊಡಿಯಾ ॥೨॥
ಮಂಗಳವೇ ಪಾಲಿಸೋ ಗಂಗಾಧರನೆ ಎನಗೆ
ಅಂಗೀಕಾರನ ಮಾಡಿ ಕುಂಭಿಣಿಯೊಳು
ಸಂಗೀತಲೋಲ ಜನಾರ್ದನವಿಠಲನ
ಅಂಗದಲಿ ಪುಟ್ಟಿದಜನಾ ಪುತ್ರ ಗುರುರಾಯ ॥೩॥
********