Showing posts with label ವಾವಿಯೀ ಪರಮಾತ್ಮಗೊಂದೂ ಇಲ್ಲ pranesha vittala. Show all posts
Showing posts with label ವಾವಿಯೀ ಪರಮಾತ್ಮಗೊಂದೂ ಇಲ್ಲ pranesha vittala. Show all posts

Saturday, 16 November 2019

ವಾವಿಯೀ ಪರಮಾತ್ಮಗೊಂದೂ ಇಲ್ಲ ankita pranesha vittala

by ಪ್ರಾಣೇಶದಾಸರು
ವಾವಿಯೀ ಪರಮಾತ್ಮಗೊಂದೂ ಇಲ್ಲ |ಶ್ರೀ ವರನೆ ಇದು ಅಲ್ಲವೆಂಬರಿಲ್ಲ ಪ

ಮೊಮ್ಮಕ್ಕಳನ್ನು ವಂಚಿಸಿ ತಾನೆ ಕೊಲ್ಲಿಸಿದ |ಮೊಮ್ಮಗಗೆ ತನ್ನ ತಂಗಿಯನು ಕೊಟ್ಟ ||ಮೊಮ್ಮಗನ ನಾದಿನಿಯರಲ್ಲಿ ಮಕ್ಕಳ ಪಡೆದ |ಮೊಮ್ಮಗನ ವಹಿಸಿ ಪುತ್ರನ್ನ ಅಳಿದ 1

ಒಬ್ಬ ಮಾವನ ನೋಡ ನೋಡ ಪ್ರಾಣವಕೊಂಡ|ಒಬ್ಬ ಮಾವನ ಕೂಡ ಕಡಿದಾಡಿದ ||ಒಬ್ಬ ಮಾವನ ಮೇಲೆ ಬಾಣವನ್ನೇರಿಸಿದ |ಒಬ್ಬ ಮಾವನ ಮಗನಮಾನಕಳೆದ2

ಒಬ್ಬ ಅತ್ತೆಗೆ ತಾನೆ ತಂದೆಯನ್ನಿಸಿಕೊಂಬ |ಒಬ್ಬ ಅತ್ತೆಗೆ ಗಂಡನಾದನಿವನು |ಒಬ್ಬ ಅತ್ತೆಗೆ ಮಾವನಾದನೀ ಕೇಶವನು |ಒಬ್ಬ ಅತ್ತೆಯ ಬಹಳ ಶ್ರಮ ಬಡಿಸಿದ 3

ಒಬ್ಬ ಮಗಳನು ತನ್ನ ಹಿರಿಯ ಮಗನಿಗೆ ಕೊಟ್ಟ |ಒಬ್ಬ ಮಗಳನು ತಾನೇ ಮದುವೆಯಾದ ||ಒಬ್ಬ ಮಗಳಿಗೆ ಒಂದು ರೀತಿಯಲಿ ಮಗನಾದ |ಒಬ್ಬ ಮಗಳನು ಹಲವರಲ್ಲಿರಿಸುವ 4

ಇವನ ನಿಜ ಭಕ್ತನೆಂಬವನು ತನ್ನ ಸತಿಯನು |ಸವಿಯಾಗಿ ನಾಲ್ವರಿಗೆಹಂಚಿಕೊಟ್ಟ ||ಭುವನದೊಳಗೆ ಪ್ರಾಣೇಶ ವಿಠಲನ ಮನೆ ನಡತೆಯಿದು |ಕವಿಗಳೆಲ್ಲರು ತಿಳಿದು ಪೂಜಿಸುತಿಹರು ಮುದದೀ 5
*******