..
ಉದ್ಧಾರ ಮಾಡೆಯ್ಯಾ ಸಿದ್ಧೇಶ್ವರ | ಸದ್ಧರ್ಮದಲಿ ಸತತ
ಶುದ್ಧಮನವನು ಕೊಟ್ಟು | ನೀಲ ಲೋಹಿತ ವಿಗತ
ಚೈಲ ಭೂಷಿತ ಭನಿಸಿತ ಕಾಲಾರಿ ಶಿವ ದ್ರೌಣಿಂ ಶೂಲಪಾಣಿ
ಹಾಲವಿಪುರವಾಸ | ಹಾಲಾ ಹಲವ ಮೆದ್ದು ತಾಳಲಾರದೆ
ಕೊಂಡ ಮೇತೌಷಧವನಿತ್ತು 1
ವ್ಯಾಧ ರೂಪದಿ ರಣದಿ ಕಾದು ಪಾರ್ಥನೆ ಸೋತು
ನೀ ದಯದಿ ದಿವ್ಯಾಸ್ತ್ರ ಪಾಲಿಸಿದೆಯೋ | ಸಾದರದಿ
ನಾ ನಿನ್ನ ಪಾದಕೆರಗುವೆ | ಎನಗೆ ಮೋದದಿಂದಲಿ
ಪಂಚಭೇದ ಜ್ಞಾನವನರುಹಿ 2
ಕಾಮಾರಿ ಸುಪವಿತ್ರ ಸೋಮಾರ್ಕ ಶಿಬಿನೇತ್ರ
ಶಾಮಸುಂದರ ವಿಠಲಸ್ವಾಮಿ ಮಿತ್ರ | ಪ್ರೇಮಾಬ್ಧಿ
ಸುಚರಿತ್ರ | ಹೈಮವತಿ ಕಳತ್ರ | ತಾಮರಸ
ಭವಪುತ್ರ ಧವಳಗಾತ್ರ 3
***