..
kruti by ವಿಶ್ವೇಂದ್ರತೀರ್ಥರು vishwendra teertharu sode mutt
ವಾಣಿ
ವೀಣಾಪಾಣಿ ಬ್ರಹ್ಮನರಾಣಿ ಪಾಹಿ
ಕಿಂಕರ ಪಾಪಕÀೃಪಾಣೀ ಪ
ಖ್ಯಾತೇ ವೇದಮಾತೇ
ನಾಗಭೂಷಣ ಮಾತೇ
ಮಾಲಾಪುಸ್ತಕ ಶೋಭಿತಹಸ್ತೇ 1
ಭವ್ಯೇ ಭವ್ಯಕೃತ್ಯೇ ಭವ
ಮುಖ್ಯರಿಗಭಯವನಿತ್ತೇ
ಮತ್ತೆ ಗಿರಿಜಾದಿಗಳಿಗೆ ನೀನತ್ತೆ 2
ಶುಕ್ಲೇ ಪರಶುಕ್ಲೇ
ಶುಕ್ಲಹಂಸದಿ ಮೆರೆದಿರ್ಪೆ
ಶುಕ್ಲ ರಾಜೇಶ ಹಯಮುಖ ಭಕ್ತೇ 3
***